ನವದೆಹಲಿ(ನ.23): ಬ್ಯಾಂಕ್‌‌'ಗಳು, ಪೋಸ್ಟ್‌ ಆಫೀಸ್‌ಗಳು, ಎಟಿಎಂಗಳ ಮುಂದೆ ದೊಡ್ಡ-ದೊಡ್ಡ ಕ್ಯೂಗಳಲ್ಲಿ ನಿಂತು ಹೈರಾಣಾಗುತ್ತಿದ್ದಾರೆ. ಹೀಗೆ ದಿನ ಸಾಲಿನಲ್ಲಿ ನಿಂತು ನಿಟ್ಟುಸಿರು ಬಿಡುತ್ತಿರುವವರು ಗಂಟೆಗೆ ಒಂದಿಷ್ಟು ಹಣ ಕೊಟ್ಟರೆ ನಿಮ್ಮ ಸಹಾಯಕ್ಕೆ ಒಬ್ಬ 'ಚೋಟು' ಬರಲಿದ್ದಾನೆ.

ಬ್ಯಾಂಕ್‌‌ಗಳು, ಪೋಸ್ಟ್‌ ಆಫೀಸ್‌ಗಳು, ಎಟಿಎಂಗಳ ಮುಂದೆ ನಿಮ್ಮ ಪರವಾಗಿ ಸಾಲಿನಲ್ಲಿ ನಿಲ್ಲಲು 'ಸಹಾಯಕ ಚೋಟು'ನನ್ನು ಒದಗಿಸಲು ದೆಹಲಿ ಮೂಲದ ಸಂಸ್ಥೆಯೊಂದು ರೆಡಿ ಇದೆ. 'ಬುಕ್‌ ಮೈ ಚೋಟು' ಎಂಬ ಆನ್‌ಲೈನ್‌ ಸರ್ವೀಸ್‌ ಸಂಸ್ಥೆ ಇಂತದೊಂದು ವ್ಯವಸ್ಥೆ ಮಾಡಿದೆ.

ಸತ್ಯಜಿತ್ ಸಿಂಗ್‌ ಬೇಡಿ ಎಂಬುವವರು ಈ 'ಬುಕ್‌ ಮೈ ಚೋಟು' ಆನ್‌ಲೈನ್‌ ಸರ್ವೀಸ್‌ ಶುರುಮಾಡಿದ್ದಾರೆ. 'ಬುಕ್‌ ಮೈ ಚೋಟುಗೆ ಲಾಗಿನ್ ಆಗಿ ನಿಮ್ಮ ಹೆಸರು, ಸ್ಥಳ ತಿಳಿಸಿದರೆ ಚೋಟು ನೀವು ನಿಂತ ಬ್ಯಾಂಕ್‌ ಅಥವಾ ಎಟಿಎಂ ಮುಂದೆ ರೆಡಿ ಇರುತ್ತಾನೆ. ಆ ಚೋಟುಗೆ ಗಂಟೆ ಲೆಕ್ಕಾಚಾರದಲ್ಲಿ ಇಂತಿಷ್ಟು ಅಂತ ಹಣ ನೀಡಬೇಕು.