Asianet Suvarna News Asianet Suvarna News

ಅಗಸ್ಟಾ ವೆಸ್ಟ್'ಲ್ಯಾಂಡ್ ಹಗರಣ: ಮಾಜಿ ವಾಯುಪಡೆ ಮುಖ್ಯಸ್ಥ ತ್ಯಾಗಿ ವಿರುದ್ಧ ಚಾರ್ಚ್'ಶೀಟ್

ಆರೋಪಪಟ್ಟಿ ಸಲ್ಲಿಸಿರುವ ಪ್ರಕಾರ ವಿವಿಐಪಿ ಅಗಸ್ಟಾ ವೆಸ್ಟ್'ಲ್ಯಾಂಡ್ ಖರೀದಿ ಹಗರಣದಲ್ಲಿ ತ್ಯಾಗಿ ಅವರು ಲಂಚಕ್ಕೆ ಬದಲಾಗಿ ಬೇರೆ ರೀತಿಯಲ್ಲಿ ಅನುಕೂಲ ಪಡೆದಿದ್ದರು. ಈ ಹಗರಣದಲ್ಲಿ ಭಾಗಿಯಾಗಿದ್ದ  ಒರ್ಸಿ ಮತ್ತು ಸ್ಪಾಗ್ನೋಲಿನಿ ಅವರಿಗೆ ಇಟಲಿ ಕೋರ್ಟ್ ಈಗಾಗಲೇ ಶಿಕ್ಷೆ ವಿಧಿಸಿದೆ.

Chopper scam CBI files chargesheet against ex IAF Chief Tyagi

ನವದೆಹಲಿ(ಆ.01): ಯುಪಿಎ ಸರ್ಕಾರದ ಆಡಳಿತದ ಅವಧಿಯಲ್ಲಿ ನಡೆದಿದೆ ಎನ್ನಲಾದ ವಿವಿಐಪಿ ಹೆಲಿಕಾಪ್ಟ್'ರ್ ಅಗಸ್ಟಾ ವೆಸ್ಟ್'ಲ್ಯಾಂಡ್'ಗೆ ಸಂಬಂಧಿಸಿದಂತೆ ಸಿಬಿಐ  ಮಾಜಿ ವಾಯುಪಡೆಯ ಮುಖ್ಯಸ್ಥ ಎಸ್'ಪಿ ತ್ಯಾಗಿ ಹಾಗೂ 9 ಇತರರ ವಿರುದ್ಧ ಆರೋಪಪಟ್ಟಿ ದಾಖಲಿಸಿದೆ.

ವಾಯುಪಡೆಯ ಉಪ ಮುಖ್ಯಸ್ಥ ಜೆ.ಎಸ್. ಗುಜ್ರಾಲ್, ತ್ಯಾಗಿ ಅವರ ಸಂಬಂಧಿ ಜೂಲಿ ತ್ಯಾಗಿ, ಅಗಸ್ಟಾ ವೆಸ್ಟ್'ಲ್ಯಾಂಡ್ ಕಂಪನಿಯ  ಮಾಜಿ ಸಿಇಒ ಗೈಸೆಪೆ ಒರ್ಸಿ, ಫಿನ್ಮೆಕ್ಕಾನಿಕ'ಸ್ ಬ್ರೂನೋ ಸ್ಪಾಗ್ನೋಲಿನಿ, ಯೂರೋಪಿನ ಮೂವರು ಮಧ್ಯವರ್ತಿ'ಗಳು, ಭಾರತೀಯ ಮಧ್ಯವರ್ತಿ ಗೌತಮ್ ಖೈತಾನ್ ಸೇರಿದಂತೆ 9 ಮಂದಿಯ ವಿರುದ್ಧ ಆರೋಪಪಟ್ಟಿ ದಾಖಲಿಸಲಾಗಿದೆ.

ಆರೋಪಪಟ್ಟಿ ಸಲ್ಲಿಸಿರುವ ಪ್ರಕಾರ ವಿವಿಐಪಿ ಅಗಸ್ಟಾ ವೆಸ್ಟ್'ಲ್ಯಾಂಡ್ ಖರೀದಿ ಹಗರಣದಲ್ಲಿ ತ್ಯಾಗಿ ಅವರು ಲಂಚಕ್ಕೆ ಬದಲಾಗಿ ಬೇರೆ ರೀತಿಯಲ್ಲಿ ಅನುಕೂಲ ಪಡೆದಿದ್ದರು. ಈ ಹಗರಣದಲ್ಲಿ ಭಾಗಿಯಾಗಿದ್ದ  ಒರ್ಸಿ ಮತ್ತು ಸ್ಪಾಗ್ನೋಲಿನಿ ಅವರಿಗೆ ಇಟಲಿ ಕೋರ್ಟ್ ಈಗಾಗಲೇ ಶಿಕ್ಷೆ ವಿಧಿಸಿದೆ.

ಯುರೋಪಿಯನ್ ಮಧ್ಯವರ್ತಿ ಕಾರ್ಲೊ ಗೆರೊಸಾ ಪರಿಚಯ ಸಂಜೀವ್‌ಗಿತ್ತು ಮತ್ತು ಲಂಚದ ಹಣವನ್ನು ಭಾರತಕ್ಕೆ ತಲುಪಿಸುವ ಯೋಜನೆ ಖೇತಾನ್ ರೂಪಿಸಿದ್ದ ಎಂದು ಸಿಬಿಐ ಆಪಾದಿಸಿದೆ. 2007ರಲ್ಲಿ ನಿವೃತ್ತರಾಗಿರುವ ತ್ಯಾಗಿ, ಸಂಜೀವ ಮತ್ತು ಖೇತಾನ್ ಡಿ. 9ರಂದು ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿದ್ದರು. ಆರೋಪಿಗಳು ಪ್ರಸ್ತುತ ಜಾಮೀನಿನ ಆಧಾರದಲ್ಲಿ ಬಿಡುಗಡೆಯಾಗಿದ್ದಾರೆ.

Follow Us:
Download App:
  • android
  • ios