ಅಪಘಾತ : 8 ಹಸುಗಳು ಸ್ಥಳದಲ್ಲೇ ಸಾವು

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 10, Aug 2018, 12:42 PM IST
Chitradurga Accident 8 Cowes Dead
Highlights

ಚಿತ್ರದುರ್ಗದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 8 ಹಸುಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಅಲ್ಲದೇ 22 ಹಸುಗಳನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. 

ಚಿತ್ರದುರ್ಗ:  ಇಲ್ಲಿನ ಮಾಡದ ಕೆರೆ ಬಳಿ ಲಾರಿ ಪಲ್ಟಿಯಾಗಿ 8 ದನಗಳು ಸಾವನ್ನಪ್ಪಿವೆ.  ಅಕ್ರಮವಾಗಿ ದನಗಳನ್ನು ಸಾಗಿಸುತ್ತಿದ್ದ ವೇಳೆ ಮರಕ್ಕೆ ಡಿಕ್ಕಿಯಾಗಿ ಬಿದ್ದಿರುವ ಲಾರಿ.

ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಮಾಡದಕೆರೆ ಬಳಿ ಪೂರ್ತಿ ಮುಚ್ಚಿರುವ ಗೂಡ್ಸ್ ಲಾರಿಯಲ್ಲಿ ದನಗಳ ಸಾಗಣೆ ಮಾಡಲಾಗುತ್ತಿತ್ತು. ಈ ವೇಳೆ ಲಾರಿ ಮರಕ್ಕಡ ಡಿಕ್ಕಿಯಾಗಿ ಉರುಳಿ ಬಿದ್ದಿದೆ.  ಈ ವೇಳೆ ವಿಚಾರ ತಿಳಿದ ಸ್ಥಳೀಯರು ದನಗಳ ರಕ್ಷಣೆಗೆ ಮುಂದಾಗಿದ್ದು,  ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. 

ಒಂದೇ ಲಾರಿಯಲ್ಲಿ ಹೆಚ್ಚಿನ ಸಂಖ್ಯೆ ದನಗಳನ್ನು ತುಂಬಲಾಗಿದ್ದು,  ಈ ವೇಳೆ ಸ್ಥಳದಲ್ಲಿ 8ಕ್ಕೂ ಅಧಿಕ ದನಗಳು ಸಾವನ್ನಪ್ಪಿವೆ. ಲಾರಿಯಲ್ಲಿದ್ದ 22ಕ್ಕೂ ಅಧಿಕ ದನಗಳನ್ನು ರಕ್ಷಣೆ ಮಾಡಲಾಗಿದೆ. 

ಸ್ಥಳದಲ್ಲಿ ಅಪಘಾತ ಸಂಭವಿಸಿದ ಹಿನ್ನೆಲೆಯಲ್ಲಿ ಅಕ್ರಮ ದನಗಳ ಸಾಗಣೆ ಪ್ರಕರಣ ಬಯಲಿಗೆ ಬಂದಿದ್ದು ಕೇರಳ ರಾಜ್ಯಕ್ಕೆ ದನಗಳನ್ನು ಸಾಗಿಸುತ್ತಿದ್ದ ಶಂಕೆ ವ್ಯಕ್ತವಾಗಿದೆ.  ಸ್ಥಳಕ್ಕೆ ಹೊಸದುರ್ಗ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಾಂದರ್ಬಿಕ ಚಿತ್ರ

loader