ತಮಿಳುನಾಡಿನ ಕಿಂಗ್ ಮೇಕರ್ ಚಿನ್ನಮ್ಮನನ್ನ ಮೀಟ್ ಮಾಡೋದಕ್ಕೆ, ಪರಮಾಪ್ತ ಬಂಟ ಪಳನಿಸ್ವಾಮಿ ಪರಪ್ಪನ ಅಗ್ರಹಾರಕ್ಕೆ ಇಂದು ಆಗಮಿಸುವ ಸಾಧ್ಯತೆ ಇದೆ. ಕಂಬಿ ಹಿಂದೆ ಕೂತು, ಇಡೀ ತಮಿಳುನಾಡಿನ ಆಳ್ವಿಕೆ ನಡೆಸುತ್ತಿರುವ ಚಿನ್ನಮ್ಮನ ಮಾತನ್ನು, ಪಳನಿ ಇದುವರೆಗೂ ಚಾಚೂ ತಪ್ಪದೇ ಪಾಲಿಸಿದ್ದಾಗಿದೆ. ಮುಂದಿನ ನಡೆ ಬಗ್ಗೆ ಕೂಡ ಚಿನ್ನಮ್ಮ ಮಾರ್ಗದರ್ಶನ ನೀಡಲು ತಯಾರಾಗಿದ್ದಾರೆ.
ಚೆನ್ನೈ(ಫೆ.20): ತಮಿಳುನಾಡಿನ ಕಿಂಗ್ ಮೇಕರ್ ಚಿನ್ನಮ್ಮನನ್ನ ಮೀಟ್ ಮಾಡೋದಕ್ಕೆ, ಪರಮಾಪ್ತ ಬಂಟ ಪಳನಿಸ್ವಾಮಿ ಪರಪ್ಪನ ಅಗ್ರಹಾರಕ್ಕೆ ಇಂದು ಆಗಮಿಸುವ ಸಾಧ್ಯತೆ ಇದೆ. ಕಂಬಿ ಹಿಂದೆ ಕೂತು, ಇಡೀ ತಮಿಳುನಾಡಿನ ಆಳ್ವಿಕೆ ನಡೆಸುತ್ತಿರುವ ಚಿನ್ನಮ್ಮನ ಮಾತನ್ನು, ಪಳನಿ ಇದುವರೆಗೂ ಚಾಚೂ ತಪ್ಪದೇ ಪಾಲಿಸಿದ್ದಾಗಿದೆ. ಮುಂದಿನ ನಡೆ ಬಗ್ಗೆ ಕೂಡ ಚಿನ್ನಮ್ಮ ಮಾರ್ಗದರ್ಶನ ನೀಡಲು ತಯಾರಾಗಿದ್ದಾರೆ.
ಚಿನ್ನಮ್ಮನ್ನ ಜೈಲು ಹಕ್ಕಿ ಮಾಡಿದರೆ, ನಮ್ಮ ಹಾದಿ ಸುಗಮ ಆಗುತ್ತದೆ ಎಂದು ಕೆಲವರು ಪ್ಲಾನ್ ಮಾಡಿದ್ದರು. ಅವರ ಆಸೆಯಂತೆಯೇ ಚಿನ್ನಮ್ಮ ಜೈಲು ಪಾಲಾದರು. ಆದರೆ ಮುಂದೆ ನಡೆದಿದ್ದೆಲ್ಲಾ ಚಿನ್ನಮ್ಮನ ಮಾಸ್ಟರ್ ಪ್ಲಾನ್ ನಂತೆಯೇ. ಸ್ಟೆಪ್ ಬೈ ಸ್ಟೆಪ್ ಬ್ಲೂ ಪ್ರಿಂಟ್ ರೆಡಿಮಾಡಿರುವ ಚಿನ್ನಮ್ಮ ಇಂದು ಸೆಕೆಂಡ್ ಪ್ಲಾನನ್ನು ಪಳನಿ ಸ್ವಾಮಿಗೆ ಬೋಧಿಸುವ ಸಾಧ್ಯತೆ ಇದೆ
ಇಂದು ಸಿಎಂ ಪಳನಿ ಸ್ವಾಮಿ ಚಿನ್ನಮ್ಮನ ದರ್ಶನದ ಜೊತೆಗೆ ಉಪದೇಶ ಕೂಡ ಸಿಗಲಿದೆ. ಪಳನಿ ಮಾತ್ರವಲ್ಲ, ಚಿನ್ನಮ್ಮನ ಇನ್ನೂ ಹಲವಾರು ಮುಖಂಡರುಗಳು ಇಂದು ಶಶಿಕಲಾ ಭೇಟಿಗಾಗಿ ಪರಪ್ಪನ ಅಗ್ರಹಾರಕ್ಕೆ ಆಗಮಿಸುವ ಸಾಧ್ಯತೆ ಇದೆ.
ಸೈನೈಡ್ ಮಲ್ಲಿಕಾಳಿಂದ ಚಿನ್ನಮ್ಮ ಜೀವಕ್ಕಿದಿಯಂತೆ ಆಪತ್ತು
ತಮಿಳುನಾಡಲ್ಲಿ ಪಳನಿ ಪಟ್ಟ ಕನ್ಫರ್ಮ್ ಆಗಿದ್ದ ಬೆನ್ನಲ್ಲೇ ಚಿನ್ನಮ್ಮ ಹೊಸ ನಾಟಕವೊಂದನ್ನು ಆರಂಭಿಸಿದ್ದಾರೆ. ಕರ್ನಾಟಕ ತಮಿಳುನಾಡು ಮಧ್ಯೆ ಕಾವೇರಿ ವಿವಾದ ಇದೆ. ಅಷ್ಟೇ ಅಲ್ಲದೇ ನನ್ನ ಬ್ಯಾರಕ್ ಸಮೀಪದಲ್ಲೇ ಸೈನೈಡ್ ಮಲ್ಲಿಕಾ ಇದ್ದಾಳೆ. ಇದರಿಂದ ನನಗೆ ಭದ್ರತೆ ಲೋಪ ಮತ್ತು ಜೀವ ಭಯ ಇದೆ. ಹೀಗಾಗಿ ನನ್ನನ್ನ ಚೆನ್ನೈ ಜೈಲಿಗೆ ಶಿಫ್ಟ್ ಮಾಡಿ ಅಂತಾ ಚಿನ್ನಮ್ಮ ನ್ಯಾಯಾಲಯಕ್ಕೆ ಮೊರೆ ಹೋಗಿದ್ದಾರೆ.
ಪರಪ್ಪನ ಅಗ್ರಹಾರದಲ್ಲಾದರೆ ಕೇವಲ ಬ್ಲೂ ಪ್ರಿಂಟ್ ರೆಡಿ ಮಾಡಬಹುದು, ಆದ್ರೆ ಚೆನ್ನೈ ಜೈಲು ಸೇರಿದರೆ, ಅಲ್ಲೇ ಕುಳಿತು ಹಿಂಬಾಗಿಲ ರಾಜಕಾರಣ ಮಾಡಬಹುದು ಎನ್ನುವುದು ಚಿನ್ನಮ್ಮನ ಮುಂದಿನ ಪ್ಲಾನ್. ಇಲ್ಲಿ ಸಾಮಾನ್ಯ ಖೈದಿಯಾಗಿರುವ ಚಿನ್ನಮ್ಮ, ಚೆನ್ನೈ ಜೈಲಿಗೇನಾದರು ಶಿಫ್ಟ್ ಆದ್ರೆ ರಾಜವೈಭೋಗದ ಆಳ್ವಿಕೆ ನಡೆಸುವುದಂತೂ ಖಚಿತ.
