Asianet Suvarna News Asianet Suvarna News

ಯುದ್ಧ ಬಯಸುವ ಸೋಶಿಯಲ್ ಮೀಡಿಯಾ ವೀರರಿಗೆ ಭಾರತ-ಚೀನಾ ಯೋಧರ ಉತ್ತರ!

ಹೊಡಿ, ಬಡಿ, ಕಡಿಯ ಮಧ್ಯೆ ಇನ್ನೂ ಜೀವಂತವಾಗಿದೆ ಹಿಂದಿ-ಚೀನಿ ಭಾಯೀ ಭಾಯೀ| ಭಾರತ-ಚೀನಾ ನಡುವೆ ಯುದ್ಧ ಸಂಭವಿಸಲಿದೆ ಅನ್ನೋರಿಗೆ ಸೈನಿಕರ ಉತ್ತರ| ಚೀನಿ ಸೈನಿಕನಿಂದ ಸಾಂಪ್ರದಾಯಿಕ ತಾಯ್ ಚಿ ಸಮರಕಲೆ ಕಲಿತ ಭಾರತೀಯ ಅಧಿಕಾರಿ| ಆತ್ಮೀಯವಾಗಿ ಬೆರೆತು ತಾಯ್ ಚಿ ಸಮರಕಲೆ ಹೇಳಿಕೊಟ್ಟ ಚೀನಿ ಯೋಧ| ಭಾರತ-ಚೀನಾ ಜಂಟಿ ಸೇನಾ ಕವಾಯತು ವೇಳೆ ಭ್ರಾತೃತ್ವ ಮೆರೆದ ಸೈನಿಕರು

Chinese Soldier Teaches Tai chi to Indian Officer
Author
Bengaluru, First Published Dec 29, 2018, 2:13 PM IST | Last Updated Dec 29, 2018, 2:18 PM IST

ನವದೆಹಲಿ(ಡಿ.29): ಗಡಿಯಲ್ಲಿ ಉದ್ವಿಗ್ನತೆ, ಚೀನಿ ಸೈನಿಕರ ಉಪಟಳ, ಭಾರತೀಯ ಯೋಧರ ಉತ್ತರ, ಇನ್ನೇನು ಭಾರತ-ಚೀನಾ ನಡುವೆ ಘನಘೋರ ಯುದ್ಧ...ಬರೀ ಇಂತವೇ ಸುದ್ದಿಗಳನ್ನು ಓದ, ನೋಡಿರುವ ನಮಗೆಲ್ಲಾ ಇಲ್ಲೊಂದು ಅಪರೂಪದ ವಿಡಿಯೋ 'ಅಸಲಿ ಕಹಾನಿ'ಯನ್ನು ಬಿಚ್ಚಿಟ್ಟಿದೆ.

ಡೋಕ್ಲಾಮ್ ವಿವಾದದ ಬಳಿಕ ಇನ್ನೇನು ಭಾರತ ಮತ್ತು ಚೀನಿ ಸೈನಿಕರು ಯುದ್ಧಭೂಮಿಯಲ್ಲಿ ಎದುರುಗೊಳ್ಳಲಿದ್ದಾರೆ ಎಂದೇ ಬಹುತೇಕರ ಅಭಿಪ್ರಾಯವಾಗಿತ್ತು. ಎರಡೂ ಕಡೆಯ ಸಾಮಾಜಿಕ ಜಾಲತಾಣಗಳ ವೀರರಂತೂ ನುಗ್ಗಿಬಿಡಿ, ಹೊಡೆದುಬಿಡಿ ಅಂತೆಲ್ಲಾ ಅಬ್ಬರಿಸಿ ಹೊದ್ದು ಮಲಗಿದ್ದೂ ಆಯಿತು.

ಆದರೆ ತಮ್ಮ ತಮ್ಮ ಗಡಿ ಕಾಯುವ ಕಾಯಕದಲ್ಲಿ ನಿರತರಾಗಿರುವ ಸೈನಿಕರು ಮಾತ್ರ ತಮ್ಮ ದೋಸ್ತಿಯನ್ನು ಕಾಪಾಡಿಕೊಂಡೇ ಬಂದಿದ್ದಾರೆ. ಗಡಿಯ ಸುರಕ್ಷತೆ ವಿಷಯ ಬಂದಾಗ ಪರಸ್ಪರ ಬಂದೂಕು ಗುರಿ ಇಡಲು ಎಂದೂ ಹಿಂಜರಿದವರಲ್ಲ ಈ ಸೈನಿಕರು. ಆದರೆ ಅವರಿಗೇನಿದ್ದರೂ ದೇಶ ಮೊದಲು, ದ್ವೇಷ ನಂತರ.

ಆದರೆ ಹಿಂದಿ-ಚೀನಿ ಭಾಯೀ ಭಾಯೀ ಘೋಷಣೆಯನ್ನು ಅಷ್ಟು ಸುಲಭವಾಗಿ ಎರಡೂ ದೇಶಗಳು ಮರೆತಿಲ್ಲ. ಅದಕ್ಕೆ ಈ ವಿಡಿಯೋ ಸಾಕ್ಷಿ ಒದಗಿಸಿದೆ. ಭಾರತ ಮತ್ತು ಚೀನಾ ಸೈನಿಕರ ಜಂಟಿ ಕವಾಯತು ವೇಳೆ ಚೀನಿ ಸೈನಿಕನೋರ್ವ ಭಾರತೀಯ ಸೇನಾ ಅಧಿಕಾರಿಗೆ ತನ್ನ ಸಾಂಪ್ರದಾಯಿಕ ತಾಯ್ ಚೀ ಸಮರ ಕಲೆ ಹೇಳಿ ಕೊಡುತ್ತಿರುವ ವಿಡಿಯೋ ಭಾರೀ ವೈರಲ್ ಆಗಿದೆ.

ಚೀನಿ ಸೈನಿಕನೋರ್ವ ಅತ್ಯಂತ ಆತ್ಮೀಯವಾಗಿ ಭಾರತೀಯ ಅಧಿಕಾರಿ ಜೊತೆ ಬೆರೆತಿದ್ದಲ್ಲದೇ, ಅವರಿಗೆ ತಾಯ್ ಚಿ ಸಮರಕಲೆಯನ್ನು ಹೇಳಿ ಕೊಟ್ಟಿದ್ದಾನೆ. ಭಾರತೀಯ ಅಧಿಕಾರಿ ಕೂಡ ಶ್ರದ್ಧೆಯಿಂದ ತಾಯ್ ಚಿ ಸಮರಕಲೆ ಅಭ್ಯಾಸ ಮಾಡಿ ಗಮನಸೆಳೆದಿದ್ದಾರೆ.

Latest Videos
Follow Us:
Download App:
  • android
  • ios