ನಮ್ಮ ದೇಶವನ್ನು ಛಿದ್ರಗೊಳಿಸಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ ಆದರೆ ನಮ್ಮ ಭದ್ರತಾ ಸಿಬ್ಬಂದಿ ನಿತ್ಯ ಇಬ್ಬರು ಅಥವಾ ನಾಲ್ವರನ್ನು ಕೊಲ್ಲುತ್ತಿದ್ದಾರೆ'

ಲಖನೌ(ಅ.15): ಭಾರತ ದುರ್ಬಲ ರಾಷ್ಟ್ರವಾಗಿ ಉಳಿದಿಲ್ಲ ನಾವು ಕೂಡ ನಿಮ್ಮಷ್ಟೆ ಬಲಶಾಲಿಗಳೆಂದು ಚೀನಾ ಅರಿತುಕೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಚೀನಾ ದೇಶಕ್ಕೆ ಎಚ್ಚರಿಕೆ ನೀಡಿದ್ದಾರೆ.

ಲಖನೌನಲ್ಲಿ ತಾವು ಪ್ರತಿನಿಧಿಸುತ್ತಿರುವ ಲೋಕಸಭಾ ಕ್ಷೇತ್ರದಲ್ಲಿ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ದೇಶ ಪ್ರಬಲವಾಗಿದೆ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಹೊಂದಿದೆ. ನಮ್ಮ ಗಡಿಗಳೆಲ್ಲವೂ ಸುರಕ್ಷಿತವಾಗಿವೆ. ಚೀನಾ ಇದನ್ನು ಅರ್ಥ ಮಾಡಿಕೊಳ್ಳಬೇಕು' ಎಂದು ತಾವು ಯಾವುದಕ್ಕೂ ಜಗ್ಗುವುದಿಲ್ಲ ಎಂದು ತಿಳಿಸಿದರು.

ಪಾಕಿಸ್ತಾನ ಭಯೋತ್ಪಾದಕರ ತಾಣ ಹಾಗೂ ಉಗ್ರಗಾಮಿಗಳನ್ನು ಭಾರತಕ್ಕೆ ಕಳುಹಿಸುತ್ತಿದೆ. ಇದು ನಮ್ಮ ದೇಶವನ್ನು ಛಿದ್ರಗೊಳಿಸಲು ಪ್ರಯತ್ನಿಸುತ್ತಿದೆ ಆದರೆ ನಮ್ಮ ಭದ್ರತಾ ಸಿಬ್ಬಂದಿ ನಿತ್ಯ ಇಬ್ಬರು ಅಥವಾ ನಾಲ್ವರನ್ನು ಕೊಲ್ಲುತ್ತಿದ್ದಾರೆ' ಎಂದು ಹೇಳಿದರು.