Asianet Suvarna News Asianet Suvarna News

ಭಾರತದ ಹೆಮ್ಮೆಯ ನಳಂದಾ ಯೂನಿವರ್ಸಿಟಿಯನ್ನೂ ಡೂಪ್ಲಿಕೇಟ್ ಮಾಡಿದ ಚೀನಾ..!

ನಳಂದಾ ಪುನಾರಂಭಕ್ಕೆ ಸಲಹೆ ಕೊಟ್ಟಿದ್ದ ಚೀನಾ ದೇಶ ಸದ್ದಿಲ್ಲದೆಯೇ ತನ್ನ ನೆಲದಲ್ಲೇ ಮತ್ತೊಂದು ನಳಂದಾ ವಿಶ್ವವಿದ್ಯಾಲಯ ಆರಂಭಿಸಿದೆ. ದಕ್ಷಿಣ ಚೀನಾದ ತುದಿಯಲ್ಲಿರುವ ಹೈನನ್ ಪ್ರಾಂತ್ಯದ ಬೆಟ್ಟಗುಡ್ಡ ಹಸಿರು ಪರಿಸರದಲ್ಲಿ 618 ಎಕರೆ ಪ್ರದೇಶದಲ್ಲಿ ಚೀನಾ ದೇಶವು ನಳಂದಾ ಯೂನಿವರ್ಸಿಟಿಯ ಕ್ಯಾಂಪಸ್ ಕಟ್ಟಿದೆ.

china secretly builds nalanda university in its land

ನವದೆಹಲಿ(ಜೂನ್ 08): ಭಾರತ ಒಂದು ಕಾಲದಲ್ಲಿ ವಿಶ್ವದ ಗುರುವಾಗಿತ್ತು ಎಂದು ಹೇಳುವುದನ್ನು ನಾವು ಕೇಳಿರುತ್ತೇವೆ. ಅದಕ್ಕೆ ಕಾರಣ, ನಮ್ಮಲ್ಲಿದ್ದ ನಳಂದಾ ವಿವಿಯಂಥ ಶಿಕ್ಷಣ ಸಂಸ್ಥೆಗಳ ಭವ್ಯ ಪರಂಪರೆ. ಶತಮಾನಗಳ ಹಿಂದೆ ವಿಶ್ವಾದ್ಯಂತ ವಿದ್ಯಾರ್ಥಿಗಳು ನಳಂದ ವಿಶ್ವವಿದ್ಯಾಲಯಕ್ಕೆ ಬಂದು ವಿದ್ಯೆ ಕಲಿತುಹೋಗುತ್ತಿದ್ದರು. ಕ್ರಿ.ಶ. 6ರಿಂದ 12ನೇ ಶತಮಾನದವರೆಗೂ ಈ ನಳಂದಾ ಯೂನಿವರ್ಸಿಟಿಯು ವಿಶ್ವದ ಅತ್ಯಂತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿತ್ತು. ಅಲ್ಲಿ 2 ಸಾವಿರ ಗುರುಗಳು ಹಾಗೂ 10 ಸಾವಿರ ವಿದ್ಯಾರ್ಥಿಗಳು ವಿದ್ಯೆ ಕಲಿಯುತ್ತಿದ್ದರೆಂದರೆ ಅದರ ಅಸಾಮಾನ್ಯತೆಯನ್ನು ಅಂದಾಜಿಸಿಕೊಳ್ಳಬಹುದು.

ಬೇರೆ ಬೇರೆ ಕಾರಣಗಳಿಂದ ನಿಂತು ಹೋದ ನಳಂದಾ ಯೂನಿವರ್ಸಿಟಿಯನ್ನು ಮೂರು ವರ್ಷಗಳ ಹಿಂದೆ ಬಿಹಾರದಲ್ಲಿ ಪುನಾರಂಭ ಮಾಡಲಾಗಿದೆ. 2006ರಲ್ಲಿ ನಳಂದಾ ಪುನರುತ್ಥಾನವಾಗಬೇಕೆಂದು ಕೋರಿದ ರಾಷ್ಟ್ರಗಳಲ್ಲಿ ಚೀನಾ ಕೂಡ ಒಂದು. ಚೀನಾ, ಸಿಂಗಾಪುರದಂಥ ದೇಶಗಳು ನೀಡಿದ ಸಲಹೆಯನ್ನು ಒಪ್ಪಿಕೊಂಡು ಭಾರತ 2014ರಲ್ಲಿ ನಳಂದಾ ವಿವಿಯನ್ನು ಪುನಾರಂಭಿಸಿದೆ.

ಆದರೆ, ಇಷ್ಟೇ ಆಗಿದ್ದರೆ ಒಳ್ಳೆಯದಿತ್ತು. ನಳಂದಾ ಪುನಾರಂಭಕ್ಕೆ ಸಲಹೆ ಕೊಟ್ಟಿದ್ದ ಚೀನಾ ದೇಶ ಸದ್ದಿಲ್ಲದೆಯೇ ತನ್ನ ನೆಲದಲ್ಲೇ ಮತ್ತೊಂದು ನಳಂದಾ ವಿಶ್ವವಿದ್ಯಾಲಯ ಆರಂಭಿಸಿದೆ. ದಕ್ಷಿಣ ಚೀನಾದ ತುದಿಯಲ್ಲಿರುವ ಹೈನನ್ ಪ್ರಾಂತ್ಯದ ಬೆಟ್ಟಗುಡ್ಡ ಹಸಿರು ಪರಿಸರದಲ್ಲಿ 618 ಎಕರೆ ಪ್ರದೇಶದಲ್ಲಿ ಚೀನಾ ದೇಶವು ನಳಂದಾ ಯೂನಿವರ್ಸಿಟಿಯ ಕ್ಯಾಂಪಸ್ ಕಟ್ಟಿದೆ. ನನ್ಹೈ ಬುದ್ಧಿಸ್ಟ್ ಕಾಲೇಜು ಎಂದೂ ಕರೆಯಲಾಗುವ ಈ ಶಿಕ್ಷಣ ಸಂಸ್ಥೆ ಈ ವರ್ಷ ಆರಂಭಗೊಂಡಿದ್ದು ಮೊದಲ ಬ್ಯಾಚ್'ನಲ್ಲಿ 220 ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲಾಗಿದೆ.

ಪಾಲಿ, ಟಿಬೆಟಿಯನ್ ಮತ್ತು ಚೀನೀ ಭಾಷೆಗಳಲ್ಲಿ ಪಾಠ ಹೇಳಿಕೊಡಲಾಗುತ್ತದೆ. ಬೌದ್ಧ ಧರ್ಮ, ಟಿಬೆಟಿಯನ್ ಬೌದ್ಧ ಧರ್ಮ ಮತ್ತು ಬೌದ್ಧ ವಾಸ್ತುಶಿಲ್ಪ ಸೇರಿದಂತೆ ಆರು ವಿಭಾಗಗಳು ಈ ಶಿಕ್ಷಣ ಸಂಸ್ಥೆಯಲ್ಲಿವೆ.

ಯೂನಿರ್ಸಿಟಿ ಎಲ್ಲಿದೆ?
ಚೀನಾದ ನಳಂದಾ ಯೂನಿವರ್ಸಿಟಿ ಇರುವುದು ಹೈನಾನ್ ಪ್ರಾಂತ್ಯದಲ್ಲಿ. ಚೀನಾದ ದಕ್ಷಿಣ ತುದಿಯಲ್ಲಿದೆ ಈ ಪ್ರಾಂತ್ಯ. ಬ್ರಹ್ಮ ದೇಶ ಅಥವಾ ಬರ್ಮಾ ಅಥವಾ ಮಯನ್ಮಾರ್ ದೇಶದ ಪಕ್ಕದಲ್ಲಿ ಈ ಪ್ರಾಂತ್ಯವಿದೆ.

Follow Us:
Download App:
  • android
  • ios