ಚೀನಾಗೆ ಸಂಬಂಧಪಟ್ಟ ಭೂಪ್ರದೇಶಕ್ಕೆ ದಲಾಯಿ ಲಾಮಾ ಭೇಟಿ ನೀಡುವುದನ್ನು ನಾವು ವಿರೋಧಿಸುತ್ತೇವೆ. ನಾವು ನಮ್ಮ ಅಭಿಪ್ರಾಯವನ್ನು ಭಾರತಕ್ಕೆ ತಿಳಿಸಿದ್ದೇವೆ ಎಂದು ಚೀನಾ ಹೇಳಿದೆ.
ಬೀಜಿಂಗ್ (ಏ.01): ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಲು ಟಿಬೆಟಿಯನ್ ಧರ್ಮಗುರು ದಲಾಯಿ ಲಾಮಾ ಅವರಿಗೆ ಅನುಮತಿ ನೀಡಿರುವುದನ್ನು ಆಕ್ಷೇಪಿಸಿರುವ ಚೀನಾವು, ಭಾರತವು ಪ್ರಮಾದವೆಸಗುತ್ತಿದೆಯೆಂದು ಹೇಳಿದೆ.
ಭಾರತದಕ್ರಮವು ದ್ವಿಪಕ್ಷೀಯ ಸಂಬಂದಗಳ ಮೇಲೆ ಗಂಭೀರ ದುಷ್ಪರಿಣಾಮಗಳನ್ನು ಬೀರಲಿದೆ ಎಂದು ಚೀನಾವಿದೇಶಾಂಗ ಇಲಾಖೆ ವಕ್ತಾರ ಲು ಕಾಂಗ್ ಹೇಳಿದ್ದಾರೆ.
ಚೀನಾಗೆ ಸಂಬಂಧಪಟ್ಟ ಭೂಪ್ರದೇಶಕ್ಕೆ ದಲಾಯಿ ಲಾಮಾ ಭೇಟಿ ನೀಡುವುದನ್ನು ನಾವು ವಿರೋಧಿಸುತ್ತೇವೆ. ನಾವು ನಮ್ಮ ಅಭಿಪ್ರಾಯವನ್ನು ಭಾರತಕ್ಕೆ ತಿಳಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
ಭಾರತವು ಚೀನಾದ ಆರೊಗಳನ್ನು ಅಲ್ಲಗಳೆದಿದೆ ಹಾಗೂ ದಲಾಯಿ ಲಾಮಾ ಭೇಟಿಯು ಧಾರ್ಮಿಕ ಸ್ವರೂಪದ್ದು ಎಂದು ಹೇಳಿದೆ.
ಎ.4 ರಿಂದ ಒಂದು ವಾರಗಳ ಕಾಲ ದಲಾಯಿ ಲಾಮಾ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಈ ನಡುವೆ ಅವರು ಟಿಬೆಟಿಯನ್ ಬೌದ್ಧರ 6ನೇ ಧರ್ಮಗುರು ಸ್ಯಾಂಗ್ಯಾಂಗ್ ಗ್ಯಾಸ್ಟೋ ಅವರ ಜನ್ಮಸ್ಥಳವಾದ ತವಾಂಗ್’ಗೂ ಭೇಟಿ ನೀಡಲಿದ್ದಾರೆ.
ಟಿಬೆಟಿಯನ್ ಬೌದ್ಧರ 14ನೇ ಧರ್ಮಗುರು (ದಲಾಯಿ ಲಾಮಾ) ವಾಗಿರುವತೆಂಝಿನ್ ಗ್ಯಾಸ್ಟೋ ಅವರನ್ನು ಚೀನಾವು ಪ್ರತ್ಯೇಕವಾದಿಯಾಗಿ ಕಾಣುತ್ತದೆ ಹಾಗೂ ಅರುಣಾಚಲ ಪ್ರದೇಶ ತನಗೆ ಸೇರಿದ್ದು ಎಂದು ಕ್ಯಾತೆ ತೆಗೆಯುತ್ತಾ ಬಂದಿದೆ.
