ನವದೆಹಲಿಯಲ್ಲಿರುವ ಚೀನೀ ದೂತಾವಾಸ ಕಚೇರಿಯ ಮೂಲಕ ಸಲಹೆಗಳನ್ನು ಬಿಡುಗಡೆ ಮಾಡಿದ್ದು, ಭಾರತ ಪ್ರವಾಸ ಕೈಗೊಳ್ಳುವ ತಮ್ಮ ದೇಶದ ಪ್ರವಾಸಿಗರು ತಮ್ಮ ಸುರಕ್ಷತೆ ಬಗ್ಗೆ ಗರಿಷ್ಠ ಕಾಳಜಿ ಹಾಗೂ ಸುತ್ತಮುತ್ತಲಿನ ಪರಿಸ್ಥಿತಿಗಳನ್ನು ಅರಿತುಕೊಂಡು ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಿದೆ.
ನವದೆಹಲಿ(ಜು.08): ಭಾರತ-ಚೀನಾ ಗಡಿ ಉದ್ವಿಗ್ನತೆ ಸ್ಥಿ ನಿರ್ಮಾಣವಾಗಿರುವ ಹಿನ್ನಲೆಯಲ್ಲಿ ಭಾರತದ ಪ್ರವಾಸ ಕೈಗೊಳ್ಳುವ ತನ್ನ ಪ್ರಜೆಗಳಿಗೆ ಚೀನಾ ಸರ್ಕಾರ 'ಸುರಕ್ಷತಾ ಸಲಹೆ'ಗಳನ್ನು ನೀಡಿದೆ.
ನವದೆಹಲಿಯಲ್ಲಿರುವ ಚೀನೀ ದೂತಾವಾಸ ಕಚೇರಿಯ ಮೂಲಕ ಸಲಹೆಗಳನ್ನು ಬಿಡುಗಡೆ ಮಾಡಿದ್ದು, ಭಾರತ ಪ್ರವಾಸ ಕೈಗೊಳ್ಳುವ ತಮ್ಮ ದೇಶದ ಪ್ರವಾಸಿಗರು ತಮ್ಮ ಸುರಕ್ಷತೆ ಬಗ್ಗೆ ಗರಿಷ್ಠ ಕಾಳಜಿ ಹಾಗೂ ಸುತ್ತಮುತ್ತಲಿನ ಪರಿಸ್ಥಿತಿಗಳನ್ನು ಅರಿತುಕೊಂಡು ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಿದೆ.
ಅಲ್ಲದೆ ಇದೊಂದು ಸಲಹೆ ಮಾತ್ರವಾಗಿದ್ದು, ಎಚ್ಚರಿಕೆ'ಯಲ್ಲ. ತಮ್ಮ ದೇಶದ ಪ್ರವಾಸಿಗರು ಜಾಗರೂಕರಾಗಿರಲಿ ಎಂಬ ಸಲಹೆಯಷ್ಟೆ ಎಂದು ಬೀಜಿಂಗ್‌ನಲ್ಲಿನ ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ. ಡೋಕ್ಲಾಂ ಗಡಿ ಬಿಕ್ಕಟ್ಟಿನ ಪರಿಸ್ಥಿತಿ ಹಿನ್ನೆಲೆಯಲ್ಲಿ, ಇಂತಹದೊಂದು ಸೂಚನೆ ನೀಡುವುದಾಗಿ ಜುಲೈ 5ರಂದು ಚೀನಾ ಸರ್ಕಾರ ಸ್ಪಷ್ಟಪಡಿಸಿತ್ತು.
ಭಾರತದಲ್ಲಿ ಚೀನಾದ ಬಗ್ಗೆ ಹೆಚ್ಚು ವಿರೋಧ ಭಾವನೆ ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ಚೀನಿ ಕಂಪನಿಗಳು ತಮ್ಮ ಬಂಡವಾಳ ಹೂಡಿಕೆ ಕಡಿಮೆ ಮಾಡುವಂತೆ ಸಲಹೆಯನ್ನ ಸಹ ನೀಡಿತ್ತು. ಸಿಕ್ಕಿಂ'ನ ದೋಕಾ ಲಾ ಸಾರ್ವತ್ರಿಕ ಪ್ರದೇಶದಲ್ಲಿ ಜೂನ್ 26ರಂದು ಚೀನಾದ ಸೇನಾ ಪಡೆ ಭಾರತದ ಬಂಕರ್'ಗಳನ್ನು ನಾಶ ಪಡಿಸಿದ ನಂತರ ಎರಡೂ ದೇಶಗಳ ನಡುವೆ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದೆ.