ಉಗ್ರರ ನೆಲೆಗಳಲ್ಲಿ ಚೀನಾ ಧ್ವಜ ದೊರಕಿರುವುದು ಇದೀಗ ಹಲವು ಅನುಮಾಗಳಿಗೆ ಎಡೆಮಾಡಿಕೊಟ್ಟಿದ್ದು, ಕಾಶ್ಮೀರ ಹಿಂಸಾಚಾರದಲ್ಲಿ ಕೇವಲ ಪಾಕಿಸ್ತಾನವಷ್ಟೇ ಅಲ್ಲದೆ, ಚೀನಾ ದೇಶದ ಕೈವಾಡ ಕೂಡ ಇದೆಯೇನೋ ಎಂಬ ಹಲವು ಶಂಕೆಗಳು ಮೂಡತೊಡಗಿದೆ.

ಶ್ರೀನಗರ (ಅ.20): ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಪ್ರದೇಶದಲ್ಲಿದ್ದ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ದಾಳಿ ಮಾಡಿದೆ. ದಾಳಿ ವೇಳೆ ಚೀನಾ ಹಾಗೂ ಪಾಕಿಸ್ತಾನ ದೇಶಗಳ ಧ್ವಜ, ಭಾರೀ ಪ್ರಮಾಣದ ಬಾಂಬ್ ಗಳನ್ನು ವಶಕ್ಕೆ ಪಡೆದುದಿದೆ. ಉಗ್ರರ ನೆಲೆಗಳಲ್ಲಿ ಚೀನಾ ಧ್ವಜ ದೊರಕಿರುವುದು ಇದೀಗ ಹಲವು ಅನುಮಾಗಳಿಗೆ ಎಡೆಮಾಡಿಕೊಟ್ಟಿದ್ದು, ಕಾಶ್ಮೀರ ಹಿಂಸಾಚಾರದಲ್ಲಿ ಕೇವಲ ಪಾಕಿಸ್ತಾನವಷ್ಟೇ ಅಲ್ಲದೆ, ಚೀನಾ ದೇಶದ ಕೈವಾಡ ಕೂಡ ಇದೆಯೇನೋ ಎಂಬ ಹಲವು ಶಂಕೆಗಳು ಮೂಡತೊಡಗಿದೆ. ಬಾರಾಮುಲ್ಲಾದ 10 ಹಳೆಯ ಪಟ್ಟಣದಲ್ಲಿ ಭಾರತೀಯ ಸೇನೆ 12 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿತ್ತು. ಪ್ರತ್ಯೇಕತಾವಾದಿಗಳೆಂದು ಹೇಳಿಕೊಂಡಿರುವ ಕ್ವಾಝಿ ಹಮಾಮ್, ಗಣೈ ಹಮಾಮ್, ಟವೀದ್ ಗುಂಜ್, ಜಮ್ಯಾ ಹಾಗೂ ಇನ್ನಿತರರ ಮನೆಗಳ ಮೇಲೆ ದಾಳಿ ನಡೆಸಿತ್ತು