Asianet Suvarna News Asianet Suvarna News

ಅಮೆರಿಕದೊಂದಿಗೆ ಯುದ್ಧವಾದರೆ ಸರ್ವನಾಶ: ಚೀನಾ ರಕ್ಷಣಾ ಸಚಿವ!

‘ಅಮೆರಿಕ-ಚೀನಾ ನಡುವೆ ಯುದ್ಧವಾದರೆ ಸರ್ವನಾಶ ಖಚಿತ’| ಚೀನಾ ರಕ್ಷಣಾ ಸಚಿವ ವೆಯಿ ಫೆಂಗೆ ಅಭಿಮತ| ‘ತೈವಾನ್ ಆಡಳಿತದಲ್ಲಿ ಅಮೆರಿಕ ಅನಗತ್ಯ ಹಸ್ತಕ್ಷೇಪ’| ‘ತೈವಾನ್ ಮೇಲಿನ  ಅಧಿಪತ್ಯಕ್ಕಾಗಿ ಚೀನಾ ಹೋರಾಡಲಿದೆ’| ವಾಣಿಜ್ಯ ಸಮರದಿಂದ ವಿಶ್ವಕ್ಕೆ ನಷ್ಟ ಎಂದ ಚೀನಾ ರಕ್ಷಣಾ ಸಚಿವ| 

China Defence Minister Says War With US Will Bring Disaster
Author
Bengaluru, First Published Jun 2, 2019, 6:26 PM IST

ಸಿಂಗಾಪೂರ್(ಜೂ.02): ಅಮೆರಿಕ-ಚೀನಾ ನಡುವೆ ಯುದ್ಧ ಸಂಭವಿಸಿದರೆ ಅದರಿಂದ ವಿಶ್ವದ ಸರ್ವನಾಶ ಖಚಿತ ಎಂದು ಚೀನಾದ ರಕ್ಷಣಾ ಸಚಿವ ವೆಯಿ ಫೆಂಗೆ ಅಭಿಪ್ರಾಯಪಟ್ಟಿದ್ದಾರೆ.

ಸಿಂಗಾಪೂರದಲ್ಲಿ ಶಾಂಗ್ರಿ-ಲಾ ಶೃಂಗಸಭೆ ಉದ್ದೇಶಿಸಿ ಮಾತನಾಡಿದ ವೆಯಿ ಫೆಂಗೆ,  ತೈವಾನ್ ಆಡಳಿತದಲ್ಲಿ ಅಮೆರಿಕದ ಹಸ್ತಕ್ಷೇಪ ಉಭಯ ದೇಶಗಳ ನಡುವೆ ಬಿಗುವಿನ ವಾತಾವರಣ ಸೃಷ್ಟಿಸಬಲ್ಲದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ತೈವಾನ್ ಮೇಲಿನ ತನ್ನ ಅಧಿಪತ್ಯವನ್ನು ಉಳಿಸಿಕೊಳ್ಳಲು ಚೀನಾ ಕೊನೆಯವರೆಗೂ ಹೋರಾಡಲಿದೆ ಎಂದ ವೆಯಿ ಫೆಂಗೆ, ಅಮೆರಿಕದ ಅನಗತ್ಯ ಹಸ್ತಕ್ಷೇಪವನ್ನು ಹಿಮ್ಮೆಟ್ಟಿಸಲಾಗುವುದು ಎಂದು ಹೇಳಿದ್ದಾರೆ.

ಇದೇ ವೇಳೆ ಅಮೆರಿಕ-ಚೀನಾ ನಡುವಿನ ವಾಣಿಜ್ಯ ಸಮರದ ಕುರಿತು ಮಾತನಾಡಿರುವ ವೆಯಿ ಫೆಂಗೆ, ಚೀನಾ ಮಾತುಕತೆಗೆ ಸದಾ ಸಿದ್ಧವಿದ್ದು, ಈ ವಾಣಿಜ್ಯ ಸಮರದಿಂದ ವಿಶ್ವಕ್ಕೆ ಅಪಾರ ನಷ್ಟವಾಗುತ್ತಿದೆ ಎಂದು ಖೇದ ವ್ಯಕ್ತಪಡಿಸಿದ್ದಾರೆ.
 

Follow Us:
Download App:
  • android
  • ios