ತನ್ನ ಮಿತ್ರರಾಷ್ಟ್ರದ ಉತ್ಪನ್ನಗಳಾದ ಕಲ್ಲಿದ್ದಲು, ಕಬ್ಬಿಣ, ಸೀಸ, ಸಮುದ್ರಾಹಾರದ ಆಮದನ್ನು ಸಂಪೂರ್ಣವಾಗಿ ನಿಷೇಧಿಸುವ ಮೂಲಕ ಅಮೆರಿಕಾದ ಜೊತೆ ಯುದ್ಧೋತ್ಸಾಹದಲ್ಲಿದ್ದ ರಾಷ್ಟ್ರಕ್ಕೆ ಒಂದು ರೀತಿಯಲ್ಲಿ ಪರೋಕ್ಷ ಎಚ್ಚರಿಕೆ ನೀಡಿದೆ.
ಬೀಜಿಂಗ್(ಆ.14): ಕಠಿಣ ಪರಿಸ್ಥಿತಿಯಲ್ಲಿಯೂ ಉತ್ತರ ಕೊರಿಯಾ'ಕ್ಕೆ ಸದಾ ಬೆಂಬಲ ನೀಡುತ್ತಾ ಬಂದಿರುವ ಮಿತ್ರ ರಾಷ್ಟ್ರ ಚೀನಾ ಹಠಾತ್'ಗಿ ಶಾಕ್ ನೀಡಿದೆ.
ತನ್ನ ಮಿತ್ರರಾಷ್ಟ್ರದ ಉತ್ಪನ್ನಗಳಾದ ಕಲ್ಲಿದ್ದಲು, ಕಬ್ಬಿಣ, ಸೀಸ, ಸಮುದ್ರಾಹಾರದ ಆಮದನ್ನು ಸಂಪೂರ್ಣವಾಗಿ ನಿಷೇಧಿಸುವ ಮೂಲಕ ಅಮೆರಿಕಾದ ಜೊತೆ ಯುದ್ಧೋತ್ಸಾಹದಲ್ಲಿದ್ದ ರಾಷ್ಟ್ರಕ್ಕೆ ಒಂದು ರೀತಿಯಲ್ಲಿ ಪರೋಕ್ಷ ಎಚ್ಚರಿಕೆ ನೀಡಿದೆ.
ಆಗಸ್ಟ್ 5 ರ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅನುಮೋದಿಸಿದ ನಿರ್ಬಂಧಗಳಿಗೆ ಅನುಗುಣವಾಗಿ ಅಧಿಕೃತ ಆಮದುಗಳನ್ನು ಹೊರತುಪಡಿಸಿ ಸೆಪ್ಟಂಬರ್ 5ರವರೆಗೆ ನಿಷೇಧಿಸಲಾಗಿದೆ. ಚೀನಾವೂ ವಿಶ್ವಸಂಸ್ಥೆಯ ಭದ್ರತಾಮಂಡಳಿಯ ಶಾಶ್ವತ ಸದಸ್ಯ ರಾಷ್ಟ್ರವಾಗಿದ್ದು, ತನ್ನ ವಿಟೋ ಅಧಿಕಾರ ಬಳಸಿ ಉತ್ತರ ಕೊರಿಯಾ ಉತ್ಪನ್ನಗಳನ್ನು ನಿಷೇಧಿಸಿದೆ.
ಈ ನಿಷೇಧವೂ ವಿಶ್ವಸಂಸ್ಥೆಯ ಬಧ್ರತಾ ಮಂಡಳಿಯ ಅನುಮೋದನೆಯಿಂದ ಉತ್ತರ ಕೊರಿಯಾ ಬಂದರಾದ ರಾಸೊನ್ ಮೂಲಕ ಆಮದಾಗುವ ಮೂರನೇ ರಾಷ್ಟ್ರಗಳಿಂದ ಬರುವ ಉತ್ಪನ್ನಗಳನ್ನು ಹೊರತುಪಡಿಸುತ್ತದೆ. ಅಮೆರಿಕಾ ಹಾಗೂ ಉತ್ತರ ಕೊರಿಯಾ ನಡುವೆ ನಡೆಯುತ್ತಿರುವ ಶೀತಲ ಸಮರದ ಹಿನ್ನಲೆಯಲ್ಲಿ ಈ ನಿಷೇಧ ಹೆಚ್ಚು ಮಹತ್ವ ಪಡೆದುಕೊಂಡಿದೆ.