Asianet Suvarna News Asianet Suvarna News

10 ವರ್ಷದಲ್ಲಿ ಭಾರತದಲ್ಲಿ ಬಾಲ್ಯ ವಿವಾಹ ಪ್ರಮಾಣ ಶೇ.20ರಷ್ಟುಇಳಿಕೆ: ವಿಶ್ವಸಂಸ್ಥೆ

ದೇಶದಲ್ಲಿ ಸಾಕ್ಷರತೆ ಸೇರಿದಂತೆ ಇನ್ನಿತರ ಪರಿಣಾಮ ಕಳೆದ 10 ವರ್ಷಗಳಲ್ಲಿ ಬಾಲ್ಯ ವಿವಾಹಗಳು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಮಕ್ಕಳ ಶಿಕ್ಷಣ ನಿಧಿ(ಯುನಿಸೆಫ್‌) ಪ್ರಶಂಸೆ ವ್ಯಕ್ತಪಡಿಸಿದೆ. ಹೆಣ್ಣು ಮಕ್ಕಳಿಗೆ ಶಿಕ್ಷಣ, ಬಾಲ್ಯ ವಿವಾಹದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ, ಮಹಿಳೆಯರ ಪರವಾಗಿನ ಸರ್ಕಾರದ ಯೋಜನೆಗಳು ಸೇರಿದಂತೆ ಇತರ ಕಾರಣಗಳಿಂದಾಗಿ ಬಾಲ್ಯ ವಿವಾಹಗಳು ಪ್ರಮಾಣ ತಗ್ಗಿದೆ ಎಂದು ವಿಶ್ವಸಂಸ್ಥೆ ಪ್ರತಿಪಾದಿಸಿದೆ.

Child marriages Decline in India  UNICEF

ನವದೆಹಲಿ: ದೇಶದಲ್ಲಿ ಸಾಕ್ಷರತೆ ಸೇರಿದಂತೆ ಇನ್ನಿತರ ಪರಿಣಾಮ ಕಳೆದ 10 ವರ್ಷಗಳಲ್ಲಿ ಬಾಲ್ಯ ವಿವಾಹಗಳು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಮಕ್ಕಳ ಶಿಕ್ಷಣ ನಿಧಿ(ಯುನಿಸೆಫ್‌) ಪ್ರಶಂಸೆ ವ್ಯಕ್ತಪಡಿಸಿದೆ. ಹೆಣ್ಣು ಮಕ್ಕಳಿಗೆ ಶಿಕ್ಷಣ, ಬಾಲ್ಯ ವಿವಾಹದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ, ಮಹಿಳೆಯರ ಪರವಾಗಿನ ಸರ್ಕಾರದ ಯೋಜನೆಗಳು ಸೇರಿದಂತೆ ಇತರ ಕಾರಣಗಳಿಂದಾಗಿ ಬಾಲ್ಯ ವಿವಾಹಗಳು ಪ್ರಮಾಣ ತಗ್ಗಿದೆ ಎಂದು ವಿಶ್ವಸಂಸ್ಥೆ ಪ್ರತಿಪಾದಿಸಿದೆ.

ಹತ್ತು ವರ್ಷಗಳ ಹಿಂದೆ 18 ವರ್ಷದೊಳಗಿನವರ ಪೈಕಿ ಶೇ.47ರಷ್ಟುಹೆಣ್ಣು ಮಕ್ಕಳು ಬಾಲ್ಯ ವಿವಾಹಕ್ಕೆ ಗುರಿಯಾಗುತ್ತಿದ್ದರು. ಆದರೆ, ಇದೀಗ ಈ ಪ್ರಮಾಣ ಶೇ.27ಕ್ಕೆ ಕುಸಿದಿದೆ ಎಂದು ಯುನಿಸೆಫ್‌ ಹೇಳಿದೆ. ಈ ಕುರಿತು ಮಂಗಳವಾರ ಯುನಿಸೆಫ್‌ ಹೊರಡಿಸಿದ ಪ್ರಕಟಣೆ ಪ್ರಕಾರ, ಜಾಗತಿಕವಾಗಿ ಕಳೆದ ಹತ್ತು ವರ್ಷ(2005-06ರಿಂದ 2015-2016ವರೆಗೆ)ಗಳಲ್ಲಿ 2.5 ಕೋಟಿ ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ. ಇದರಲ್ಲಿ ಭಾರತದಲ್ಲೇ ಅತಿಹೆಚ್ಚು ಬಾಲ್ಯ ವಿವಾಹಗಳು ತಹಬದಿಗೆ ಬಂದಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಬಾಲ್ಯ ವಿವಾಹದ ಪರಿಣಾಮವಾಗಿ ಬಾಲಕಿಯರು ತಮ್ಮ ಜೀವಿತಾವಧಿಯಲ್ಲಿ ಅನಾರೋಗ್ಯ, ಆರ್ಥಿಕ ದೌರ್ಬಲ್ಯ, ಪತಿ ಮತ್ತು ಅತ್ತೆ-ಮಾವನಿಂದ ಕಿರುಕುಳ, ಕೌಟುಂಬಿಕ ವಿಘಟನೆ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಅಲ್ಲದೆ, ಹಿಂದಿನಿಂದಲೂ ಬಳುವಳಿಯಾಗಿ ಬರುವ ಬಡತನವೇ ಅವರ ಸಂಪತ್ತಾಗಿರುತಿತ್ತು ಎಂದು ಯುನಿಸೆಫ್‌ನ ಅಂಜು ಮಲ್ಹೋತ್ರಾ ಅವರು ಅಭಿಪ್ರಾಯಪಟ್ಟಿದ್ದಾರೆ.

Follow Us:
Download App:
  • android
  • ios