ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ದೇಶದಲ್ಲಿ ಏನೆಲ್ಲಾ ಕ್ರಮಗಳನ್ನು ಜಾರಿಗೆ ತಂದರೂ ನಿಯಂತ್ರಣ ಮಾತ್ರ ಆಗ್ತಿಲ್ಲ. ಈಗ ಇದಕ್ಕೆ ಸಾಕ್ಷಿಯೆಂಬಂತೆ ದಾವಣಗೆರೆಯಲ್ಲಿ ಅಕ್ರಮ ಇಟ್ಟಿಗೆ ಭಟ್ಟಿಗಳಲ್ಲಿ ಬಾಲ ಕಾರ್ಮಿಕರು ದುಡಿಯುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಅತ್ತ ಗಮನ ಹರಿಸಿಲ್ಲ . 3 ವರ್ಷದ ಬಾಲಕಿ ಕೂಡ ಸಾವನ್ನಪ್ಪಿದ್ದರೂ ಆ ಮಗುವಿನ ಸಾವಿಗೆ ಕೇವಲ 20 ಸಾವಿರ ಬೆಲೆ ಕಟ್ಟಿ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆದಿದೆ.

ದಾವಣಗೆರೆ(ಡಿ.19): ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ದೇಶದಲ್ಲಿ ಏನೆಲ್ಲಾ ಕ್ರಮಗಳನ್ನು ಜಾರಿಗೆ ತಂದರೂ ನಿಯಂತ್ರಣ ಮಾತ್ರ ಆಗ್ತಿಲ್ಲ. ಈಗ ಇದಕ್ಕೆ ಸಾಕ್ಷಿಯೆಂಬಂತೆ ದಾವಣಗೆರೆಯಲ್ಲಿ ಅಕ್ರಮ ಇಟ್ಟಿಗೆ ಭಟ್ಟಿಗಳಲ್ಲಿ ಬಾಲ ಕಾರ್ಮಿಕರು ದುಡಿಯುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಅತ್ತ ಗಮನ ಹರಿಸಿಲ್ಲ . 3 ವರ್ಷದ ಬಾಲಕಿ ಕೂಡ ಸಾವನ್ನಪ್ಪಿದ್ದರೂ ಆ ಮಗುವಿನ ಸಾವಿಗೆ ಕೇವಲ 20 ಸಾವಿರ ಬೆಲೆ ಕಟ್ಟಿ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆದಿದೆ.

ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದಲ್ಲಿ ಕಿರ್ಲೋಸ್ಕರ ಕಾರ್ಖಾನೆ ಮುಚ್ಚಿದ ನಂತರ ಇಟ್ಟಿಗೆ ಭಟ್ಟಿ ಉದ್ಯಮ ವ್ಯಾಪಕವಾಗಿ ಬೆಳೆದಿದೆ. ಹರಿಹರ ಸುತ್ತಮುತ್ತ 10 ಕಿ ಮೀ ದೂರ ವ್ಯಾಪ್ತಿಯಲ್ಲಿ ಇಟ್ಟಿಗೆ ಭಟ್ಟಿ ಉದ್ಯಮ ವ್ಯಾಪಿಸಿದ್ದು ಸಾವಿರಾರು ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಕೂಲಿ ಕಾರ್ಮಿಕರ ಜೊತೆ ಚಿಕ್ಕ ಚಿಕ್ಕ ಮಕ್ಕಳು ಬಾಲಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಆದ್ರೆ ಅಧಿಕಾರಿಗಳು ಮಾತ್ರ ಕಂಡರೂ ಕಾಣದಂತೆ ಜಾಣ ಮೌನ ವಹಿಸಿದ್ದಾರೆ.

ಟ್ಯ್ರಾಕ್ಟರ್ ಹರಿದು 3 ವರ್ಷದ ಮಗು ಸಾವು: 20 ಸಾವಿರ ಪರಿಹಾರ ಕೊಡಿಸಿ ಕೇಸ್ ಮುಚ್ಚಲು ಯತ್ನ

ಕಳೆದ ನಾಲ್ಕು ದಿನಗಳ ಹಿಂದೆ ನಾಸಿರ್ ಎಂಬುವರಿಗೆ ಸೇರಿದ ಇಟ್ಟಿಗೆ ಭಟ್ಟಿ ಕಣವೊಂದರಲ್ಲಿ ಆಟವಾಡುತ್ತಿದ್ದ 3 ವರ್ಷದ ಮಗು ಖುಷಿ ಮೇಲೆ ಟ್ರಾಕ್ಟರ್ ಹರಿದು ಮಗು ಸಾವನ್ನಪ್ಪಿತ್ತು. ಇಟ್ಟಿಗೆ ಭಟ್ಟಿ ಮಾಲೀಕರ ಮೇಲೆ ಕ್ರಮ ತಗೋಬೇಕಿದ್ದ ಪೊಲೀಸರು, ಮಗುವಿನ ಕುಟುಂಬಕ್ಕೆ 20 ಸಾವಿರ ಪರಿಹಾರ ಕೊಡಿಸಿ ಕೇಸ್ ಮುಚ್ಚಿ ಹಾಕಲು ಹೊರಟಿದ್ದಾರಂತೆ.

ಮುದ್ದು ಕಂದನ ಜೀವಕ್ಕೆ ಮಾಲೀಕನ ಕಡೆಯಿಂದ ಬರೀ 20 ಸಾವಿರ ಬೆಲೆ ಕಟ್ಟುತ್ತಾರೆ ಎಂದರೆ, ಇವರಿಗೆಷ್ಟು ಕೊಟ್ಟಿರಬಹುದು ಎನ್ನುವ ಪ್ರಶ್ನೆ ಹುಟ್ಟುವುದು ಸಹಜ. ಇಂಥಹ ಅಧಿಕಾರಿಗಳಿಂದಾಗೇ ಜಿಲ್ಲೆಯಲ್ಲಿ 190ಕ್ಕೂ ಹೆಚ್ಚು ಅನಧಿಕೃತ ಭಟ್ಟಿಗಳು ನಡೆಯುತ್ತಿದ್ದು, ಇದರಲ್ಲಿ ಮಕ್ಕಳು ದುಡಿಯುತ್ತಿರುವುದು. ಇನ್ನಾದರೂ ಸಂಬಂಧಪಟ್ಟ ಇಲಾಖೆಗಳು ಇಂಥ ಬಾಲಕರ ರಕ್ಷಿಸಿ, ಅವರ ಭವಿಷ್ಯ ರೂಪಿಸಲು ಮುಂದಾಗಬೇಕಿದೆ.