ಪಿಎಸ್‌'ಐ ಗವಿರಾಜು ಸಾರ್ವಜನಿಕರು ಮತ್ತು ಕಾರ್ ಮಾಲೀಕರಿಗೆ ಪಿಸ್ತೂಲು ತೋರಿಸಿ ಬೆದರಿಸಿದ್ದಾರೆ.

ಚಿಕ್ಕಮಗಳೂರು(ಫೆ. 28): ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತಿಸಿದ ಪಿಎಸ್‌'ಐಗೆ ಸಾರ್ವಜನಿಕರೇ ಥಳಿಸಿರುವ ಘಟನೆ ಸಂಭವಿಸಿದೆ. ಇಲ್ಲಿಯ ಮೂಡಿಗೆರೆ ತಾಲೂಕಿನ ಮುಕ್ತಿಹಳ್ಳಿ ಗ್ರಾಮದ ಬಳಿ ಪಿಎಸ್‍ಐ ಗವಿರಾಜು ಅವರಿದ್ದ ಕಾರು ಮತ್ತೊಂದು ಕಾರಿಗೆ ಡಿಕ್ಕಿಹೊಡೆದಿದೆ. ಈ ವೇಳೆ ಕಾರಿನ ಮಾಲೀಕ ಮತ್ತು ಪಿಎಸ್‌ಐ ಗವಿರಾಜು ನಡುವೆ ಮಾತಿನ ಚಕಮಕಿ ನಡೆದಿದೆ. ಇದರಿಂದ ಕುಪಿತರಾದ ಪಿಎಸ್‌'ಐ ಗವಿರಾಜು ಸಾರ್ವಜನಿಕರು ಮತ್ತು ಕಾರ್ ಮಾಲೀಕರಿಗೆ ಪಿಸ್ತೂಲು ತೋರಿಸಿ ಬೆದರಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಪಿಎಸ್‌'ಐ ಗವಿರಾಜುಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.