ಚಿಕ್ಕರಾಯಪ್ಪ, ಜಯಚಂದ್ರ ಪರ ಗುತ್ತಿಗೆದಾರರು ಕಮಿಷನ್​ ದಂಧೆ ನಡೆಸಿರುವುದು ಐಟಿ ಅಧಿಕಾರಿಗಳ ವಿಚಾರಣೆ ವೇಳೆ ಸ್ಫೋಟಕ ಸಂಗತಿ ಬಹಿರಂಗವಾಗಿದೆ. ಈ ಇಬ್ಬರೂ ಅಧಿಕಾರಿಗಳ ಪರ ಗುತ್ತಿಗೆದಾರರಾದ ಚಂದ್ರಕಾಂತ್​, ಚಕ್ರವರ್ತಿ, ನಜೀರ್​ ಎಂಬುವರು ಮಧ್ಯಸ್ಥಿಕೆ ವಹಿಸ ಹಣ ವರ್ಗಾವಣೆ ಮಾಡಿದ್ದರು. ತಮಿಳುನಾಡಿನ 4 ಬ್ಯಾಂಕ್​ಗಳಿಂದ ಕಪ್ಪು ಹಣ ಬದಲಾವಣೆಯಾಗಿದೆ. 16 ಕೋಟಿ ಕಪ್ಪು ಹಣಕ್ಕೆ ಗುತ್ತಿಗೆದಾರರು ಹೊಸ ನೋಟು ಪಡೆದಿದ್ದರು. ತಮಿಳುನಾಡಿನ ಈರೋಡ್​, ಸೇಲಂ, ಮಧುರೈನ 4 ಬ್ಯಾಂಕ್​`ಗಳಿಂದ ಹಣ ಬದಲಾವಣೆ ಮಾಡಲಾಗಿದೆ. ಬ್ಯಾಂಕ್​ ಅಧಿಕಾರಿಗಳಿಗೆ ಕಮಿಷನ್​ ಹಣ ನೀಡಿ ಹಣ ಬದಲಾವಣೆಯಾಗಿದೆ.

ಬೆಂಗಳೂರು(ಡಿ.02): ಮನೆಯಲ್ಲಿ ಅಕ್ರಮವಾಗಿ ಕೋಟಿ ಕೋಟಿ ರೂಪಾಯಿ ಹೊಸ ನೋಟುಗಳ ಕಂತೆಯನ್ನ ಇಟ್ಟುಕೊಂಡಿದ್ದ ಸರ್ಕಾರಿ ಅದಿಕಾರಿಗಳಾದ ಚಿಕ್ಕರಾಯಪ್ಪ ಮತ್ತು ಜಯಚಂದ್ರ ಅವರ ಹಗರಣ ಬಗೆದಷ್ಟೂ ದೊಡ್ಡದಾಗುತ್ತಿದೆ. ದಿನಕ್ಕೆ 2 ಸಾವಿರ ಮಾತ್ರ ಪಡೆಯಬಹುದಾದ ಈ ಸಂದರ್ಭದಲ್ಲಿ 4.7 ಕೋಟಿಯಷ್ಟು 2000 ರು. ನೋಟು ಎಲ್ಲಿಂದ ಬಂತು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಚಿಕ್ಕರಾಯಪ್ಪ, ಜಯಚಂದ್ರ ಪರ ಗುತ್ತಿಗೆದಾರರು ಕಮಿಷನ್​ ದಂಧೆ ನಡೆಸಿರುವುದು ಐಟಿ ಅಧಿಕಾರಿಗಳ ವಿಚಾರಣೆ ವೇಳೆ ಸ್ಫೋಟಕ ಸಂಗತಿ ಬಹಿರಂಗವಾಗಿದೆ. ಈ ಇಬ್ಬರೂ ಅಧಿಕಾರಿಗಳ ಪರ ಗುತ್ತಿಗೆದಾರರಾದ ಚಂದ್ರಕಾಂತ್​, ಚಕ್ರವರ್ತಿ, ನಜೀರ್​ ಎಂಬುವರು ಮಧ್ಯಸ್ಥಿಕೆ ವಹಿಸ ಹಣ ವರ್ಗಾವಣೆ ಮಾಡಿದ್ದರು. ತಮಿಳುನಾಡಿನ 4 ಬ್ಯಾಂಕ್​ಗಳಿಂದ ಕಪ್ಪು ಹಣ ಬದಲಾವಣೆಯಾಗಿದೆ. 16 ಕೋಟಿ ಕಪ್ಪು ಹಣಕ್ಕೆ ಗುತ್ತಿಗೆದಾರರು ಹೊಸ ನೋಟು ಪಡೆದಿದ್ದರು. ತಮಿಳುನಾಡಿನ ಈರೋಡ್​, ಸೇಲಂ, ಮಧುರೈನ 4 ಬ್ಯಾಂಕ್​`ಗಳಿಂದ ಹಣ ಬದಲಾವಣೆ ಮಾಡಲಾಗಿದೆ. ಬ್ಯಾಂಕ್​ ಅಧಿಕಾರಿಗಳಿಗೆ ಕಮಿಷನ್​ ಹಣ ನೀಡಿ ಹಣ ಬದಲಾವಣೆಯಾಗಿದೆ.

ಜಯಚಂದ್ರ, ಚಿಕ್ಕರಾಯಪ್ಪ ಪರವಾಗಿ ಈ ಗುತ್ತಿಗೆದಾರರು ಬ್ಲಾಕ್​ & ವೈಟ್​ ವ್ಯವಹಾರ ನಡೆಸಿದ್ದರು ಎಂಬುದು ಐಟಿ ಅಧಿಕಾರಿಗಳ ವಿಚಾರಣೆ ವೇಳೆ ಹೊರಬಿದ್ದಿದೆ. ಈ ಬಗ್ಗೆ ಬ್ಯಾಂಕ್​ ವಹಿವಾಟಿನ ವಿವರ ನೀಡುವಂತೆ ಸಿಬಿಐ, ಜಾರಿ ನಿರ್ದೇಶನಾಲಯದಿಂದ ಬ್ಯಾಂಕ್​`ಗಳಿಗೆ ನೋಟಿಸ್​ ನೀಡಲಾಗಿದೆ.

ಈ ಮಧ್ಯೆ, ದೇಶಾದ್ಯಂತ ಕರ್ತವ್ಯಲೋಪ ಎಸಗಿದ 6 ಬ್ಯಾಂಕಿನ 27 ಬ್ಯಾಂಕ್ ಅಧಿಕಾರಿಗಳನ್ನ ಅಮಾನತು ಮಾಡಿ, ಕೇಂದ್ರ ಹಣಕಾಸು ಸಚಿವಾಲಯದಿಂದ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ.