ನ್ಯಾಯಾಲಯದಿಂದ ನಟ ಸುದೀಪ್ ಗೆ ಸಮನ್ಸ್ ಜಾರಿ

ಸ್ಯಾಂಡಲ್ ವುಡ್ ನಟ ಸುದೀಪ್ ಗೆ ಚಿಕ್ಕಮಗಳೂರು JMFC ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ವಾರಸ್ದಾರ ಧಾರವಾಹಿ ಚಿತ್ರೀಕರಣ ಬಾಡಿಗೆ ಹಣ ಪ್ರಕರಣ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ. 

Chikkamagaluru JMFC Court Issues Summons To Sandalwood Actor Sudeep

ಚಿಕ್ಕಮಗಳೂರು : ಧಾರಾವಾಹಿ ಚತ್ರೀಕರಣದ ಬಾಡಿಗೆ ಹಣ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸುದೀಪ್ ವಿರುದ್ಧ ಸಮನ್ಸ್ ಜಾರಿ ಮಾಡಲಾಗಿದೆ.  ವಾರಸ್ದಾರಾ ಧಾರಾವಾಹಿಗೆ ಮನೆ ಪಡೆದು ಬಾಡಿಗೆ ನೀಡದ ಪ್ರಕರಣ ಸಂಬಂಧ ಚಿಕ್ಕಮಗಳೂರು JMFC ನ್ಯಾಯಾಲಯದಿಂದ ಸಮನ್ಸ್ ಜಾರಿಯಾಗಿದೆ. 

ದೀಪಕ್ ಮಯೂರ್ ಎಂಬುವವರು ನೀಡಿದ ದೂರಿನ ಸಂಬಂಧ ಕೋರ್ಟ್ ವಿಚಾರಣೆಗೆ ಗೈರಾದ ಹಿನ್ನೆಲೆಯಲ್ಲಿ ಸಮನ್ಸ್ ನೀಡಲಾಗಿದೆ. 

ನಟ ಸುದೀಪ್ ನಿರ್ಮಾಣದ ವಾರಸ್ದಾರ ಧಾರಾವಾಹಿ ಚಿತ್ರೀಕರಣಕ್ಕೆ ದೀಪಕ್ ಮಯೂರ್ ಎನ್ನುವವರು ಮನೆ, ತೋಟ ಬಾಡಿಗೆ ನೀಡಿದ್ದರು. ಈ ವೇಳೆ ತೋಟ ಹಾಗೂ ಮನೆ ನಾಶ ಮಾಡಿದ್ದಾರೆ. ಅಲ್ಲದೇ ಬಾಡಿಗೆ ಹಣ ನೀಡಿಲ್ಲ ಎಂದು ದೀಪಕ್ ದೂರು ನೀಡಿದ್ದರು.  

ಈ ಪ್ರಕರಣ ಸಂಬಂಧ ನಡೆದ ವಿಚಾರಣೆಗೆ ಚಿಕ್ಕಮಗಳೂರು JMFC ನ್ಯಾಯಾಲಯಕ್ಕೆ ನಟ ಸುದೀಪ್ ಗೈರಾಗಿದ್ದು, ಈ ನಿಟ್ಟಿನಲ್ಲಿ ಸಮನ್ಸ್ ನೀಡಲಾಗಿದೆ. ಅಲ್ಲದೇ ಇದೀಗ ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ ನಟ ಸುದೀಪ್ ಗೆ ಕೋರ್ಟ್ ಸಮನ್ಸ್ ನಲ್ಲಿ ತಿಳಿಸಲಾಗಿದೆ.

Latest Videos
Follow Us:
Download App:
  • android
  • ios