ಈತನ ಮೇಲೆ ಈಗಾಗಲೆ ನಾಲ್ಕು ಬಾರಿ ಹತ್ಯಾ ಯತ್ನ ನಡೆದಿತ್ತು. ಒಮ್ಮೆ ಕೈಬಾಂಬು ಹಾಕುವ ಮೂಲಕವೂ ಕೊಲೆಗೆ ಯತ್ನಿಸಲಾಗಿತ್ತು. ಅದರೆ ಇವೆಲ್ಲವನ್ನೂ ಗೆದ್ದು ಬಂದಿದ್ದ
ಚಿಕ್ಕಬಳ್ಳಾಪುರ(ನ.16): ಇತ್ತೀಚಿಗಷ್ಟೆ ಆರ್'ಎಸ್ಎಸ್ ಕಾರ್ಯಕರ್ತ ರುದ್ರೇಶ್' ಅವರನ್ನು ಆರೋಪಿಗಳಿಬ್ಬರು ಬೈಕ್'ನಲ್ಲಿ ಬಂದು ಒಂದೇ ಏಟಿಗೆ ಕುತ್ತಿಗೆಗೆ ಹೊಡೆದು ಹತ್ಯೆ ಮಾಡಿದ್ದರು. ಇದೇ ರೀತಿಯ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಕಾಂಗ್ರೆಸ್ ಪಕ್ಷದಲ್ಲಿ ಹಲವು ವರ್ಷ ಗುರುತಿಸಿಕೊಂಡು ಮಾಜಿ ಸಚಿವ ವಿ. ಮುನಿಯಪ್ಪ ಬೆಂಬಲಿಗನಾಗಿದ್ದ ಚಿಕ್ಕಬಳ್ಳಾಪುರ ನಗರದ ವೆಂಕಟರಮಣಪ್ಪ ಉರುಫ್ ಮಿಲ್ಟ್ರಿ ವೆಂಕಟರಮಣ ಎಂಬುವರರನ್ನು ಒಂದೇ ಏಟಿಗೆ ಕೊಲೆ ಮಾಡಲಾಗಿದೆ.
ಈತನ ಮೇಲೆ ಈಗಾಗಲೆ ನಾಲ್ಕು ಬಾರಿ ಹತ್ಯಾ ಯತ್ನ ನಡೆದಿತ್ತು. ಒಮ್ಮೆ ಕೈಬಾಂಬು ಹಾಕುವ ಮೂಲಕವೂ ಕೊಲೆಗೆ ಯತ್ನಿಸಲಾಗಿತ್ತು. ಅದರೆ ಇವೆಲ್ಲವನ್ನೂ ಗೆದ್ದು ಬಂದಿದ್ದ ಈತ ಇವತ್ತು ಶೇವಿಂಗ್ ಶಾಪ್'ನಲ್ಲಿ ಒಂದೇ ಏಟಿಗೆ ಬಲಿಯಾಗಿದ್ದಾನೆ. ಬೆಳಗ್ಗೆ ಮನೆಯಿಂದ ಹೊರಬಂದು ದ್ವಿಚಕ್ರವಾಹನದಲ್ಲಿ ಸೆಲೂನ್ ಕಡೆ ಹೊರಟ ಈತನಿಗೆ ತನ್ನ ಸಾವಿನ ಬಗ್ಗೆ ಕಿಂಚಿತ್ತು ಸಂಶಯ ಇರಲಿಲ್ಲ. ಏಕಾಏಕಿ ನಡೆದಿರುವ ಈ ಘಟನೆಯಿಂದ ಇಡೀ ಕುಟುಂಬ ದಿಗ್ಬ್ರಮೆಗೊಂಡಿದೆ. ಸ್ಥಳಕ್ಕೆ ಎಸ್ಪಿ ಚೈತ್ರಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
