ಸರಕಾರದ ಖಜಾನೆ ತುಂಬಲು ಇದೀಗ ಮುಖ್ಯಮಂತ್ರಿಗೆ ತುರ್ತು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದ್ದು, ದುಂದುವೆಚ್ಚ ಕಡಿವಾಣಕ್ಕೆ ಮುಂದಾಗಿದ್ದಾರೆ. ಅನಗತ್ಯ ಸರಕಾರ ಕಾರು ಖರೀದಿಸದಂತೆ ಆದೇಶಿಸಿರುವ ಎಚ್ಡಿಕೆ, ತುರ್ತು ಸಂದರ್ಭ ಹೊರತುಪಡಿಸಿ, ಬೇರೆ ವೇಳೆ ವಿಶೇಷ ವಿಮಾನದಲ್ಲಿ ಪ್ರಯಾಣಿಸದಂತೆಯೂ ನಿರ್ಧರಿಸಿದ್ದಾರೆ.
ಬೆಂಗಳೂರು: ಆರ್ಥಿಕ ಸೋರಿಕೆ ತಡೆಗಟ್ಟಲು ಮುಂದಾಗಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ನಿಗಮ ಮಂಡಳಿ ಹಾಗೂ ಸರಕಾರದ ನಾನಾ ಇಲಾಖೆಗಳಲ್ಲಿ ಇನ್ನು ಮುಂದೆ ಕಾರು ಖರೀದಿಸುವಂತಿಲ್ಲ, ಎಂದೂ ಆದೇಶಿಸಿದ್ದಾರೆ.
ನಿಗಮ ಮಂಡಳಿಗಳಲ್ಲಿ ಕಾರುಗಳ ಖರೀದಿಗೆ ನಿರ್ಬಂಧ ಹೇರಿದ ಸಿಎಂ, ಸಚಿವರ ಮನೆ, ಕೊಠಡಿ ನವೀಕರಣದ ಹೆಸರಲ್ಲಿ ದುಂದುವೆಚ್ಚಕ್ಕೆ ಕಡಿವಾಣ ಹಾಕಿದ್ದು, ಮಿತಿಯೊಳಗೆ ನವೀಕರಿಸಲು ಸೂಚಿಸಿದ್ದಾರೆ.
ಸಿಎಂ ಬೆಂಗಾವಲು ಪಡೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ವಾಹನಗಳ ಬಳಕೆಗೆ ಕಡಿವಾಣ ಹಾಕಲು ಚಿಂತಿಸುತ್ತಿದ್ದಾರೆ. ಈ ಸಂಬಂಧ ಉನ್ನತ ಪೊಲೀಸ್ ಅಧಿಕಾರಿಗಳ ಜತೆ ಚರ್ಚೆ ನಡೆಸಲಿರುವ ಸಿಎಂ, ರಾಜ್ಯದಿಂದ ಹೊರ ಹೋಗುವಾಗ ವಿಶೇಷ ವಿಮಾನ ಬಳಸದಂತೆಯೂ ನಿರ್ಧರಿಸಿದ್ದಾರೆ. ತುರ್ತು ಸಂಧರ್ಭದಲ್ಲಿ ಮಾತ್ರ ವಿಶೇಷ ವಿಮಾನ ಬಳಸುವುದಾಗಿ ಹೇಳಿದ್ದಾರೆ.
"
ವಾರದಿಂದ ಸಂಪುಟ ವಿಸ್ತರಣೆ ಸರ್ಕಸ್‌ನಲ್ಲಿ ಬ್ಯುಸಿಯಾಗಿದ್ದ ಕುಮಾರಸ್ವಾಮಿ, ಯಾವುದೇ ಅಧಿಕೃತ ಕಾರ್ಯಕ್ರಮಗಳಿಲ್ಲದ ಕಾರಣ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ.
