Asianet Suvarna News Asianet Suvarna News

ಮೋದಿ 6 ಸಾವಿರ ರೂ.+ ಬಿಎಸ್’ವೈ 4 ಸಾವಿರ ರೂ.= ರೈತರಿಗೆ 10 ಸಾವಿರ ರೂ.!

ನೂತನ ಸಿಎಂ ಯಡಿಯೂರಪ್ಪ ಮೊದಲ ಪತ್ರಿಕಾಗೋಷ್ಠಿ| ಕಿಸಾನ್ ಸಮ್ಮಾನ್ ಯೋಜನೆಯ ಸಹಾಯಧನ ಹೆಚ್ಚಳ| ಕೇಂದ್ರದ 6 ಸಾವಿರ ರೂ. ಜೊತೆಗೆ ರಾಜ್ಯ ಸರ್ಕಾರದ 4 ಸಾವಿರ ರೂ. ಸೇರ್ಪಡೆ| ರೈತ ಸಮುದಾಯಕ್ಕೆ ವಾರ್ಷಿಕ 10 ಸಾವಿರ ರೂ. ಸಹಾಯಧನ| ನೇಕಾರರ 100 ಕೋಟಿ ರೂ. ಸಾಲಮನ್ನಾ ಘೋಷಿಸಿದ ಸಿಎಂ ಯಡಿಯೂರಪ್ಪ|  2019ರ ಮಾರ್ಚ್ 30ಕ್ಕೆ ಅನ್ವಯವಾಗುವಂತೆ ನೇಕಾರರ 100 ಕೋಟಿ ರೂ. ಸಾಲಮನ್ನಾ| 

Chief Minister BS Yediyurappa Announces Two Important Cabinet Decisions
Author
Bengaluru, First Published Jul 26, 2019, 8:08 PM IST
  • Facebook
  • Twitter
  • Whatsapp

ಬೆಂಗಳೂರು(ಜು.26): ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ, ಬಿಎಸ್ ಯಡಿಯೂರಪ್ಪ ರಾಜ್ಯದ ರೈತ ಹಾಗೂ ನೇಕಾರ ಸಮುದಾಯಕ್ಕೆ ಭರ್ಜರಿ ಯೋಜನೆ ಘೋಷಿಸಿದ್ದಾರೆ.

ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯನ್ವಯ ರೈತರಿಗೆ ದೊರೆಯುತ್ತಿದ್ದ ವಾರ್ಷಿಕ 6 ಸಾವಿರ ರೂ.ಗೆ ರಾಜ್ಯ ಸರ್ಕಾರ 4 ಸಾವಿರ ರೂ. ಅಧಿಕವಾಗಿ ಕೊಡಲಿದೆ. ಅಂದರೆ ರಾಜ್ಯದ ರೈತ ಈ ಯೋಜನೆಯಡಿ ವಾರ್ಷಿಕವಾಗಿ ಒಟ್ಟು 10 ಸಾವಿರ ರೂ. ಸಿಗಲಿದೆ.

ರಾಜ್ಯ ಸರ್ಕಾರ ಕೊಡಮಾಡುವ 4 ಸಾವಿರ ರೂ. ಅನ್ನು ಎರಡು ಕಂತುಗಳಲ್ಲಿ ರೈತರಿಗೆ ಸಂದಾಯ ಮಾಡಲಾಗುವುದು ಎಂದು ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ. ಈ ಮೂಲಕ ರೈತರಿಗೆ ಕೇಂದ್ರದ 6 ಸಾವಿರ ರೂ. ಹಾಗೂ ರಾಜ್ಯದ 4 ಸಾವಿರ ರೂ.  ಸೇರಿದಂತೆ ಒಟ್ಟು 10 ಸಾವಿರ ರೂ. ಸಿಗಲಿದೆ.

"

ನೇಕಾರ ಸಮುದಾಯಕ್ಕೆ ಬಂಪರ್:

ಇದೇ ವೇಳೆ ರಾಜ್ಯದ ನೇಕಾರರ 100 ಕೋಟಿ ರೂ. ಸಾಲಮನ್ನಾ ಘೋಷಣೆ ಮಾಡಿರುವ ಸಿಎಂ, ನೇಕಾರ ಸಮುದಾಯಕ್ಕೆ ಭರ್ಜರಿ ಕೊಡುಗೆ ಘೋಷಿಸಿದ್ದಾರೆ.  2019ರ ಮಾರ್ಚ್ 30ಕ್ಕೆ ಅನ್ವಯವಾಗುವಂತೆ ನೇಕಾರರ 100 ಕೋಟಿ ರೂ. ಸಾಲಮನ್ನಾ ಮಾಡಲಾಗಿದೆ.

Follow Us:
Download App:
  • android
  • ios