ಕರ್ನಾಟಕದ ಕೊಡಗಿನಲ್ಲಿ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಮತ್ತು ಅವರ ಕುಟುಂಬದ ಕಾಫಿ ಎಸ್ಟೇಟ್‌ನಿಂದ 2008-09ನೇ ಹಣಕಾಸು ವರ್ಷ ದಲ್ಲಿ ಗಳಿಸಿದ ಆದಾಯಕ್ಕೆ ತೆರಿಗೆ ಹಣ ಪಾವತಿಸುವಂತೆ ಆದಾಯ ತೆರಿಗೆ ಇಲಾಖೆ ನೀಡಿದ್ದ ಆದೇಶವನ್ನು ಮದ್ರಾಸ್ ಹೈಕೋರ್ಟ್ ರದ್ದುಗೊಳಿಸಿದೆ.
ಚೆನ್ನೈ: ಕರ್ನಾಟಕದ ಕೊಡಗಿನಲ್ಲಿ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಮತ್ತು ಅವರ ಕುಟುಂಬದ ಕಾಫಿ ಎಸ್ಟೇಟ್ನಿಂದ 2008-09ನೇ ಹಣಕಾಸು ವರ್ಷ ದಲ್ಲಿ ಗಳಿಸಿದ ಆದಾಯಕ್ಕೆ ತೆರಿಗೆ ಹಣ ಪಾವತಿಸುವಂತೆ ಆದಾಯ ತೆರಿಗೆ ಇಲಾಖೆ ನೀಡಿದ್ದ ಆದೇಶವನ್ನು ಮದ್ರಾಸ್ ಹೈಕೋರ್ಟ್ ರದ್ದುಗೊಳಿಸಿದೆ.
ಕಾಫಿ ಬೀಜ ಮತ್ತು ಮೆಣಸಿನಕಾಳು ಮಾರಾಟದಿಂದ ಬಂದ ಆದಾಯಕ್ಕೆ 6 ಲಕ್ಷ ರು. ತೆರಿಗೆ ಪಾವತಿಸುವಂತೆ ಆದಾಯ ತೆರಿಗೆ ನೋಟಿಸ್ ನೀಡಿತ್ತು. ಆದರೆ ನಾವು ಕಾಫಿಬೀಜ ಸಂಸ್ಕರಿಸಿಲ್ಲ. ಕಾಫಿ ಬೀಜವನ್ನು ಹಸಿಯಾಗಿ ಮಾರಿದ್ದೇವೆ. ಇದು ತೆರಿಗೆ ವ್ಯಾಪ್ತಿಗೆ ಬರದು ಎಂದು ಚಿದು ವಾದಿಸಿದ್ದರು. ಈ ವಾದವನ್ನು ಹೈಕೋರ್ಟ್ ಒಪ್ಪಿದೆ
