Asianet Suvarna News Asianet Suvarna News

ವಿದೇಶಿ ಖಾತೆ ಮಾಹಿತಿ ಬಚ್ಚಿಟ್ಟ ಚಿದು, ಕಾರ್ತಿ: ಕೋರ್ಟ್‌ಗೆ ಇಡಿ ಮಾಹಿತಿ

ಪನಾಮಾ ಪೇಪರ್ಸ್ ಹಗರಣದಲ್ಲಿ ಭಾಗಿಯಾದ ಸಂಸ್ಥೆಯಿಂದ ಸಿಂಗಾಪುರದಲ್ಲಿರುವ ಪಿ. ಚಿದಂಬರಂ ಮಾಲೀಕತ್ವದ ಸಂಸ್ಥೆ ಅಕ್ರಮ ಹಣ ಪಡೆದುಕೊಂಡಿದೆ| ವಿದೇಶಿ ಖಾತೆ ಮಾಹಿತಿ ಬಚ್ಚಿಟ್ಟ ಚಿದು, ಕಾರ್ತಿ: ಕೋರ್ಟ್‌ಗೆ ಇಡಿ ಮಾಹಿತಿ| 

Chidambaram and son withheld foreign bank account info ED tells court
Author
Bangalore, First Published May 31, 2019, 9:11 AM IST

ನವದೆಹಲಿ[ಮೇ.31]: ಏರ್‌ಸೆಲ್‌- ಮ್ಯಾಕ್ಸಿಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಹಾಗೂ ಅವರ ಮಗ ಕಾರ್ತಿ ಚಿದಂಬರಂ ವಿದೇಶಗಳಲ್ಲಿ ಬ್ಯಾಂಕ್‌ ಖಾತೆ ಹೊಂದಿದ್ದು, ಈ ಕುರಿತು ತನಿಖೆ ವೇಳೆ ಸಿಬಿಐಗೆ ಮಾಹಿತಿ ನೀಡದೇ ಮುಚ್ಚಿಟ್ಟಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಗುರುವಾರ ದೆಹಲಿ ಕೋರ್ಟ್‌ವೊಂದಕ್ಕೆ ದೂರಿದೆ.

ಪನಾಮಾ ಪೇಪ​ರ್ಸ್ಸ್ ಹಗರಣದಲ್ಲಿ ಭಾಗಿಯಾದ ಸಂಸ್ಥೆಯಿಂದ ಸಿಂಗಾಪುರದಲ್ಲಿರುವ ಪಿ. ಚಿದಂಬರಂ ಮಾಲೀಕತ್ವದ ಸಂಸ್ಥೆ ಅಕ್ರಮ ಹಣ ಪಡೆದುಕೊಂಡಿದೆ. ಈ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಲು ಕಾಲಾವಕಾಶ ನೀಡುವಂತೆ ಇ.ಡಿ. ಪರ ವಕೀಲರಾದ ತುಷಾರ್‌ ಮೆಹ್ತಾ ಮತ್ತು ಸೋನಿಯಾ ಮಾಥುರ್‌ ಕೋರ್ಟ್‌ಗೆ ಮನವಿ ಮಾಡಿದರು.

ಈ ಕುರಿತು ವಾದ ಆಲಿಸಿದ ವಿಶೇಷ ನ್ಯಾಯಾಧೀಶ ಒ.ಪಿ. ಸೈನಿ ಆಗಸ್ಟ್‌ 1 ರವರೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶಿ ಬ್ಯಾಂಕ್‌ ಖಾತೆಯ ಮಾಹಿತಿ ಸಂಗ್ರಹಿಸಿ ಸಲ್ಲಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿದರು.

Follow Us:
Download App:
  • android
  • ios