ಹೆಚ್ಚಿನ ವೇತನ ಕೊಟ್ಟರೂ ಬೇಡವೆಂದ ರಾಜ್ಯಪಾಲರು

Chhattisgarhs Governor who said no to a salary hike
Highlights

ಛತ್ತೀಸ್‌ಗಢದ ರಾಜ್ಯಪಾಲ ಬಾಲರಾಮ್‌ಜಿ ದಾಸ್‌ ಟಂಡನ್‌ ಅವರು, ‘ತಮಗೆ ಹೆಚ್ಚಿನ ವೇತನದ ಅಗತ್ಯವಿಲ್ಲ. ತಾವು 1.10 ಲಕ್ಷ ರು. ಅನ್ನು ಮಾತ್ರ ತೆಗೆದುಕೊಳ್ಳುವುದಾಗಿ,’ ಹೇಳಿದ್ದಾರೆ. 

ರಾಯ್‌ಪುರ: ಇತ್ತೀಚೆಗಷ್ಟೇ ಮಾಸಿಕ 1.10 ಲಕ್ಷ ರು. ಇದ್ದ ರಾಜ್ಯಪಾಲರ ವೇತನವನ್ನು ಕೇಂದ್ರ ಸರ್ಕಾರ 3.5 ಲಕ್ಷ ರು.ಗೆ ಏರಿಕೆ ಮಾಡಿರುವುದಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. 

ಆದರೆ, ಛತ್ತೀಸ್‌ಗಢದ ರಾಜ್ಯಪಾಲ ಬಾಲರಾಮ್‌ಜಿ ದಾಸ್‌ ಟಂಡನ್‌ ಅವರು, ‘ತಮಗೆ ಹೆಚ್ಚಿನ ವೇತನದ ಅಗತ್ಯವಿಲ್ಲ. 2016ರ ಜನವರಿಯಿಂದಲೇ ಜಾರಿಗೆ ಬರುವಂತೆ ರಾಜ್ಯಪಾಲರ ವೇತನವನ್ನು 3.5 ಲಕ್ಷ ರು.ಗೆ ಏರಿಕೆ ಮಾಡಿದ್ದಾಗ್ಯೂ, ತಾವು ಮಾತ್ರ 1.10 ಲಕ್ಷ ರು. ಅನ್ನು ಮಾತ್ರ ತೆಗೆದುಕೊಳ್ಳುವುದಾಗಿ,’ ಹೇಳಿದ್ದಾರೆ. 

ಈ ಬಗ್ಗೆ ಕಳೆದ ತಿಂಗಳು ಛತ್ತೀಸ್‌ಗಢದ ಲೆಕ್ಕಪತ್ರ ಪರಿಶೋಧಕ(ಎ.ಜಿ)ಗೆ ಪತ್ರ ಬರೆದಿರುವ ರಾಜ್ಯಪಾಲ ಟಂಡನ್‌ ಅವರು, ತಾವು ತಿಂಗಳಿಗೆ 1.10 ಲಕ್ಷ ರು. ಅನ್ನು ಮಾತ್ರ ವೇತನವಾಗಿ ಪಡೆಯುವುದಾಗಿ ತಿಳಿಸಿದ್ದಾರೆ.

loader