ವರದಿಗಾರ ಫೋನ್’ನಲ್ಲಿ ಅಪಘಾತದ ಹಾಗೂ ವಾಹನದ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿದಾಗ, ಸುಪ್ರೀತ್ ಕೌರ್’ಗೆ ಅಪಘಾತದಲ್ಲಿ ಮೃತಪಟ್ಟಿರುವವರಲ್ಲಿ ತನ್ನ ಪತಿಯೂ ಸೇರಿದ್ದಾರೆ ಎಂದು ಗೊತ್ತಾಗಿದೆ. ಆದರೂ ತಮ್ಮ ಕರ್ತವ್ಯವನ್ನು ಪಾಲಿಸಿದ ಸುಪ್ರೀತ್ ಕೌರ್ ಬುಲೆಟಿನ್ ಸಂಪೂರ್ಣಗೊಳಿಸಿದ್ದಾರೆ.

ರಾಯ್’ಪುರ (ಏ.08): ಖಾಸಗಿ ಚ್ಯಾನೆಲ್’ವೊಂದರ ಸುದ್ದಿವಾಚಕಿ ತನ್ನ ಗಂಡನ ಮರಣದ ಸುದ್ದಿಯನ್ನೇ ವಾಚಿಸಬೇಕಾದ ಘಟನೆ ಛತೀಸ್’ಗಢದಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಐಬಿಸಿ 24 ಎಂಬ ಸುದ್ದಿವಾಹಿನಿಯ ನ್ಯೂಸ್ ಆ್ಯ0ಕರ್ ಸುಪ್ರೀತ್ ಕೌರ್ ಬೆಳಗ್ಗೆ ಸ್ಟುಡಿಯೋದಲ್ಲಿ ಸುದ್ದಿ ವಾಚಿಸುತ್ತಿರುವಾಗ ಅಪಘಾತವೊಂದರ ಬ್ರೇಕಿಂಗ್ ಸುದ್ದಿ ಬಂದಿದೆ.

ಸುದ್ದಿ ಓದಿದ ಬಳಿಕ, ವರದಿಗಾರ ಫೋನ್’ನಲ್ಲಿ ಅಪಘಾತದ ಹಾಗೂ ವಾಹನದ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿದಾಗ, ಸುಪ್ರೀತ್ ಕೌರ್’ಗೆ ಅಪಘಾತದಲ್ಲಿ ಮೃತಪಟ್ಟಿರುವವರಲ್ಲಿ ತನ್ನ ಪತಿಯೂ ಸೇರಿದ್ದಾರೆ ಎಂದು ಗೊತ್ತಾಗಿದೆ. ಆದರೂ ತಮ್ಮ ಕರ್ತವ್ಯವನ್ನು ಪಾಲಿಸಿದ ಸುಪ್ರೀತ್ ಕೌರ್ ಬುಲೆಟಿನ್ ಸಂಪೂರ್ಣಗೊಳಿಸಿದ್ದಾರೆ.

ಬುಲೆಟಿನ್ ಮುಗಿಸಿದ ಬಳಿಕ ಕೂಡಲೇ ವರದಿಗಾರರನ್ನು ಸಂಪರ್ಕಿಸಿದಾಗ, ಅಪಘಾತದಲ್ಲಿ ಮೃತಪಟ್ಟವರಲ್ಲೊಬ್ಬರು ತನ್ನ ಪತಿಯೆಂದು ಖಚಿತವಾಗಿದೆ.

ಕಳೆದ 9 ವರ್ಷಗಳಿಂದ ಸುದ್ದಿವಾಚಕಿಯಾಗಿ ಕೆಲಸಮಾಡುತ್ತಿರುವ ಸುಪ್ರೀತ್ ಕೌರ್ ಕಳೆದ ವರ್ಷ ಹರ್ಶದ್ ಕಾವಡೆಯೊಂದಿಗೆ ವಿವಾಹವಾಗಿದ್ದರು.