ಇತ್ತೀಚೆಗೆ ನಟಿ ತನುಶ್ರೀ ದತ್ತಾ, ನಟ ನಾನಾ ಪಾಟೇಕರ್ ವಿರುದ್ಧ ಲೈಂಗಿಕ ಆರೋಪ ಮಾಡಿದ್ದರು. ಅದರ ಬೆನ್ನಲ್ಲೇ, ಸಾಮಾಜಿಕ  ಜಾಲತಾಣಗಳಲ್ಲಿ ಹಲವು ಪತ್ರಕರ್ತೆಯರು, ನಟಿಯರು ತಮಗಾದ ಇಂಥದ್ದೇ ಕರಾಳ ಅನುಭವ ಹಂಚಿಕೊಂಡಿದ್ದಾರೆ. ಈ ವೇಳೆ ಖ್ಯಾತ ಲೇಖಕ ಚೇತನ್ ಭಗತ್ ಹೆಸರು ಕೂಡಾ ಕೇಳಿಬಂದಿದೆ. 

ಮುಂಬೈ: ಹಾಲಿವುಡ್‌ನಲ್ಲಿ ನಡೆದ ‘ಮೀಟೂ’(ನಾನೂ ಸಹ ದೌರ್ಜನ್ಯಕ್ಕೊಳಗಾಗಿದ್ದೇನೆ) ಆಂದೋಲನ ಭಾರತದಲ್ಲೂ ದೊಡ್ಡ ಮಟ್ಟದಲ್ಲಿ ಆರಂಭವಾಗುವ ಸುಳಿವು ಕಂಡಿದೆ. 

ಇತ್ತೀಚೆಗೆ ನಟಿ ತನುಶ್ರೀ ದತ್ತಾ, ನಟ ನಾನಾ ಪಾಟೇಕರ್ ವಿರುದ್ಧ ಇಂಥದ್ದೇ ಆರೋಪ ಮಾಡಿದ್ದರು. ಅದರ ಬೆನ್ನಲ್ಲೇ, ಸಾಮಾಜಿಕ ಜಾಲತಾಣಗಳಲ್ಲಿ ಹಲವು ಪತ್ರಕರ್ತೆಯರು, ನಟಿಯರು ತಮಗಾದ ಇಂಥದ್ದೇ ಕರಾಳ ಅನುಭವ ಹಂಚಿಕೊಂಡಿದ್ದಾರೆ. ಈ ವೇಳೆ ಖ್ಯಾತ ಲೇಖಕ ಚೇತನ್ ಭಗತ್ ಹೆಸರು ಕೂಡಾ ಕೇಳಿಬಂದಿದೆ. 

ಮಹಿಳೆಯೊಬ್ಬರು, ಚೇತನ್ ಭಗತ್ ತಮ್ಮ ಜೊತೆ ಅಸಭ್ಯ ವಾಗಿ ನಡೆದುಕೊಂಡಿದ್ದನ್ನು ವಾಟ್ಸಾಪ್ ಸಂದೇಶದ ದಾಖಲೆ ಸಹಿತ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ವಿಶೇಷವೆಂದರೆ ಇದು ಸುದ್ದಿಯಾಗುತ್ತಲೇ ಚೇತನ್ ಭಗತ್ ತಮ್ಮ ತಪ್ಪು ಒಪ್ಪಿಕೊಂಡಿದ್ದಾರೆ. 

ಅಲ್ಲದೆ ಶನಿವಾರ ಕ್ಷಮೆಯನ್ನೂ ಕೋರಿದ್ದಾರೆ. ಜೊತೆಗೆ ತಮ್ಮ ಈ ಕೆಟ್ಟ ಗುಣ ಸ್ವಭಾವದ ಕುರಿತಾಗಿ ತನ್ನ ಪತ್ನಿಗೂ ಕ್ಷಮಾಪಣೆ ಕೋರಿದ್ದೆ. ಅಂದು ನನ್ನ ಕೃತ್ಯದ ಬಗ್ಗೆ ನಾಚಿಕೆಯಾಗಿ, ಮರುಕ ಪಟ್ಟಿದ್ದೇನೆ ಎಂದು ಫೇಸ್‌ಬುಕ್ ಪೇಜ್‌ನಲ್ಲಿ ಲೇಖನ ಬರೆದಿದ್ದಾರೆ.