ಎಸ್'ಬಿಐ ಬ್ಯಾಂಕ್ ಭಾರತೀಯ ಮಹಿಳಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ಬಿಕನೇರ್ ಮತ್ತು ಜೈಪುರ್, ಸ್ಟೇಟ್ ಬ್ಯಾಂಕ್ ಆಫ್ ರಾಯ್ಪುರ್, ಸ್ಟೇಟ್ ಬ್ಯಾಂಕ್ ಆಫ್ ತಿರುವಂಕೂರು, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ಈ ಬ್ಯಾಂಕ್'ಗಳಲ್ಲಿ ನೀವು ಖಾತೆಯನ್ನು ಹೊಂದಿದ್ದೀರಾ..?
ನವದೆಹಲಿ (ಡಿ.27): ಎಸ್'ಬಿಐ ಬ್ಯಾಂಕ್ ಭಾರತೀಯ ಮಹಿಳಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ಬಿಕನೇರ್ ಮತ್ತು ಜೈಪುರ್, ಸ್ಟೇಟ್ ಬ್ಯಾಂಕ್ ಆಫ್ ರಾಯ್ಪುರ್, ಸ್ಟೇಟ್ ಬ್ಯಾಂಕ್ ಆಫ್ ತಿರುವಂಕೂರು, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ಈ ಬ್ಯಾಂಕ್'ಗಳಲ್ಲಿ ನೀವು ಖಾತೆಯನ್ನು ಹೊಂದಿದ್ದೀರಾ..?
ಹಾಗಾದರೆ ಡಿ.31ರ ಒಳಗೆ ನಿಮ್ಮ ಚೆಕ್ ಬುಕ್'ನ್ನು ಬದಲಾಯಿಸಿಕೊಳ್ಳಿ ಇಲ್ಲವಾದಲ್ಲಿ ಜನವರಿಯಿಂದ ನಿಮ್ಮ ಚೆಕ್'ಬುಕ್'ಗಳು ಕಾರ್ಯನಿರ್ವಹಿಸುವುದಿಲ್ಲ.ಈ ಎಲ್ಲಾ ಬ್ಯಾಂಕ್'ಗಳು ಈಗಾಗಲೇ ಎಸ್ಬಿಐನೊಂದಿಗೆ ಮರ್ಜ್ ಆಗಿದ್ದು, ಹೊಸ ಚೆಕ್'ಬುಕ್'ಗಳನ್ನು ಹೊಸ ಐಎಫ್ಎಸ್'ಸಿ ಕೋಡ್'ನೊಂದಿಗೆ ವಿತರಣೆ ಮಾಡಲಾಗುತ್ತದೆ.
ಸೆಪ್ಟೆಂಬರ್ ತಿಂಗಳಲ್ಲೇ ವಾಯಿದೆ ಮುಗಿದಿದ್ದರೂ ಗ್ರಾಹಕರ ಅನುಕೂಲತೆಗಾಗಿ ಡಿಸೆಂಬರ್'ವರೆಗೆ ಸಮಯಾವಕಾಶವನ್ನು ವಿಸ್ತರಣೆ ಮಾಡಲಾಗಿತ್ತು. ಆದರೆ ಇದೀಗ ಬದಲಾಯಿಸಿಕೊಳ್ಳದಿದ್ದಲ್ಲಿ ನಿಮ್ಮ ಚೆಕ್ ಬುಕ್'ಗಳು ಉಪಯೋಗಕ್ಕೆ ಬಾರದಾಗುತ್ತವೆ.
