ಬಂದ್ ಗೆ ಸಣ್ಣ ವ್ಯಾಪಾರಿಗಳು, ಉದ್ದಿಮೆದಾರರು ಬೆಂಬಲ ನೀಡಲಿದ್ದಾರೆ. ರಾಜ್ಯಾದ್ಯಂತ ಸೆ.28ರಂದು ಎಲ್ಲ ಔಷಧಿ ಮಳಿಗೆಗಳು, ಮೆಡಿಕಲ್ ಶಾಪ್ ಗಳು ಬಂದ್ ಆಗಲಿವೆ

ಬೆಂಗಳೂರು[ಸೆ.20]: ಆನ್'ಲೈನ್ ನಲ್ಲಿ ಔಷಧಿ ಮಾರಾಟ ವಿರೋಧಿಸಿ ಅಖಿಲ ಭಾರತ ಔಷಧಿ ಮಾರಾಟಗಾರರ ಸಂಘ ಸೆ.28 ರಂದು ದೇಶಾದ್ಯಂತ ಬಂದ್ ಆಚರಿಸಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆನ್ ಲೈನ್ ಮಾರಾಟದಿಂದ ಸಣ್ಣ ಔಷಧಿ ವ್ಯಾಪಾರಿಗಳಿಗೆ ನಷ್ಟ ಉಂಟಾಗುತ್ತದೆ. ಈ ರೀತಿಯ ಔಷಧಿಗಳ ಮಾರಾಟ ಅಷ್ಟು ಸುರಕ್ಷತೆ ಇರುವುದಿಲ್ಲ. ಈ ಕಾರಣದಿಂದ ಅಖಿಲ ಭಾರತ ಔಷಧಿ ಮಾರಾಟಗಾರರ ಸಂಘ ಬಂದ್’ಗೆ ಕರೆ ನೀಡಲಿದೆ. 

ಬಂದ್’ಗೆ ಸಣ್ಣ ವ್ಯಾಪಾರಿಗಳು, ಉದ್ದಿಮೆದಾರರು ಬೆಂಬಲ ನೀಡಲಿದ್ದಾರೆ. ರಾಜ್ಯಾದ್ಯಂತ ಸೆ.28ರಂದು ಎಲ್ಲ ಔಷಧಿ ಮಳಿಗೆಗಳು, ಮೆಡಿಕಲ್ ಶಾಪ್ ಗಳು ಬಂದ್ ಆಗಲಿವೆ ಎಂದು ಕರ್ನಾಟಕ ಔಷಧ ಮಾರಾಟಗಾರರ ಸಂಘದ ಅಧ್ಯಕ್ಷ ರಘುನಾಥ್ ತಿಳಿಸಿದ್ದಾರೆ.