Asianet Suvarna News Asianet Suvarna News

ಬೆಲ್ಲದ ಬಣ್ಣ ನೋಡಿ ಮೋಸ ಹೋದೀರಾ ಜೋಕೆ!: ಹಳೆ ಬೆಲ್ಲ, ಸಕ್ಕರೆಗೆ ಗೊಬ್ಬರ ಕಲಬೆರಕೆ..!

ಇತ್ತೀಚಿನ ದಿನಗಳಲ್ಲಿ ಆಹಾರ ಪದಾರ್ಥಗಳಲ್ಲಿ ವಿಷಕಾರಿ ರಾಸಾಯನಿಕಗಳನ್ನು ಬೆರೆಸಿ ಮಾರಾಟ ಮಾಡುವ ದಂಧೆ ವ್ಯಾಪಕವಾಗಿ ನಡೆಯುತ್ತಿದೆ. ಇದೀಗ ಬೆಲ್ಲ ಕೂಡ ಕಲ ಬೆರೆಕೆಯಾಗುತ್ತೆ ಅನ್ನೋ ಆರೋಪ  ಕೇಳಿ ಬಂದಿದೆ. ಬೆಲ್ಲಕ್ಕೆ ಬಣ್ಣ ಬರಲು ಕೆಮಿಕಲ್ ಬಳಸುತ್ತಾರೆ ಅನ್ನೋ ಆಘಾತಕಾರಿ ವಿಚಾರ ಕೂಡ ಬೆಚ್ಚಿ ಬೀಳಿಸಿದೆ.

Chemical is mixed to Jaggery

ಶಿವಮೊಗ್ಗ(ಅ.27): ಇತ್ತೀಚಿನ ದಿನಗಳಲ್ಲಿ ಆಹಾರ ಪದಾರ್ಥಗಳಲ್ಲಿ ವಿಷಕಾರಿ ರಾಸಾಯನಿಕಗಳನ್ನು ಬೆರೆಸಿ ಮಾರಾಟ ಮಾಡುವ ದಂಧೆ ವ್ಯಾಪಕವಾಗಿ ನಡೆಯುತ್ತಿದೆ. ಇದೀಗ ಬೆಲ್ಲ ಕೂಡ ಕಲ ಬೆರೆಕೆಯಾಗುತ್ತೆ ಅನ್ನೋ ಆರೋಪ  ಕೇಳಿ ಬಂದಿದೆ. ಬೆಲ್ಲಕ್ಕೆ ಬಣ್ಣ ಬರಲು ಕೆಮಿಕಲ್ ಬಳಸುತ್ತಾರೆ ಅನ್ನೋ ಆಘಾತಕಾರಿ ವಿಚಾರ ಕೂಡ ಬೆಚ್ಚಿ ಬೀಳಿಸಿದೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಆಲೆಮನೆಗಳಲ್ಲಿ ಹಳೇ ಬೆಲ್ಲ ಹಾಗೂ ಸಕ್ಕರೆಗೆ ರಾಸಾಯನಿಕಗಳನ್ನು ಬೆರೆಸಿ ನಕಲಿ ಬೆಲ್ಲ ತಯಾರಿಸುತ್ತಿರೋದು ಬೆಳಕಿಗೆ ಬಂದಿದೆ. ಬೆಲ್ಲದ ಬಣ್ಣ ಬಿಳಿಯಾಗಿಸಲು ಸೋಡಿಯಂ ಬೈ ಕಾರ್ಬೋನೇಟ್, ಸೂಪರ್ ಪಾಸ್ಪೇಟ್, ಸಲ್ಫರ್ ಮೊದಲಾದ ರಾಸಾಯನಿಕ ಗೊಬ್ಬರಗಳನ್ನು ಬಳಸುತ್ತಿರೋದನ್ನ ಆಹಾರ ಸುರಕ್ಷತಾ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.

ಹಳೆ ಬೆಲ್ಲ , ಕಡಿಮೆ ರೇಟಿನ ಸಕ್ಕರೆ ತಂದು ಅದರೊಂದಿಗೆ ರಾಸಾಯನಿಕ ಗೊಬ್ಬರ ಮಿಶ್ರಣ ಮಾಡಿ ಅಲೆಮನೆಯ ಕೊಪ್ಪರಿಗೆಯಲ್ಲಿ ಬೇಯಿಸಿ ಕಲರ್ ಬರುವಂತೆ ಮಾಡಿ ಹೊಳೆಯುವ ಬೆಲ್ಲ ತಯಾರಿಸುತ್ತಾರೆ. ಭದ್ರಾವತಿ ತಾಲ್ಲೂಕಿನ ಕಾಗೆಹಳ್ಳ , ಭದ್ರಾ ಕಾಲೋನಿ, ಕಣಕಟ್ಟೆ , ಅರಳಹಳ್ಳಿ, ಕಾಚಗೊಂಡನ ಹಳ್ಳಿ , ಗೋಂಧಿ ಚಾನಲ್ ಮೊದಲಾದೆಡೆ ಪರಿಶೀಲನೆ ನಡೆಸಿದ ವೇಳೆ ಆಹಾರ ಪದಾರ್ಥ ಕಲಬೆರಕೆಯಾಗಿ ವಿಷಕಾರಿಯಾಗುತ್ತಿರುವುದು ಕಂಡು ಬಂದಿದೆ.

ಈ ರೀತಿ ರಾಸಾಯನಿಕಗಳ ಬಳಕೆಯ ಬೆಲ್ಲ ಸೇವನೆಯಿಂದ ನರ ದೌರ್ಬಲ್ಯ, ಹೊಟ್ಟೆಯಲ್ಲಿ ಹುಣ್ಣು , ನಿಶ್ಯಕ್ತಿ, ವಾಂತಿ , ಗ್ಯಾಸ್ ಟ್ರಿಕ್ ಮೊದಲಾದ ಕಾಯಿಲೆಗಳಿಗೆ ಜನರು ತುತ್ತಾಗುತ್ತಾರೆ.

 

Follow Us:
Download App:
  • android
  • ios