ಬೆಳಗಾವಿಯಲ್ಲಿ ಎರಡನೇ ಮದುವೆಯಾದಾತ ಅದು ಪತ್ನಿಯ ಮೂರನೇ ಮದುವೆ ಎಂದು ತಿಳಿದು ಠಾಣೆ ಮೆಟ್ಟಿಲೇರಿದ್ದಾರೆ. ದೂರು ದಾಖಲಿಸಿರುವ ಮಹಾಂತೇಶ್ ಮೊದಲ ಪತ್ನಿ ಕಾಣೆಯದಾದ ಒಂದು ವರ್ಷದ ಬಳಿಕ ಮನೆಯವರ ಒತ್ತಾಯಕ್ಕೆ ಮಣಿದು ಗೀತಾ ಎಂಬುವರನ್ನು ಮದುವೆಯಾಗಿದ್ದರು. ಗೀತಾ ಮೊದಲ ಎರಡು ಮದುವೆಗಳನ್ನು ಮುಚ್ಚಿಟ್ಟು ಮಹಾಂತೇಶ್ರನ್ನು 3ನೇ ಮದುವೆಯಾಗಿರುವುದು ಬಯಲಾಗಿದೆ.
ಬೆಳಗಾವಿ(ಅ.05): ಬೆಳಗಾವಿಯಲ್ಲಿ ಎರಡನೇ ಮದುವೆಯಾದಾತ ಅದು ಪತ್ನಿಯ ಮೂರನೇ ಮದುವೆ ಎಂದು ತಿಳಿದು ಠಾಣೆ ಮೆಟ್ಟಿಲೇರಿದ್ದಾರೆ. ದೂರು ದಾಖಲಿಸಿರುವ ಮಹಾಂತೇಶ್ ಮೊದಲ ಪತ್ನಿ ಕಾಣೆಯದಾದ ಒಂದು ವರ್ಷದ ಬಳಿಕ ಮನೆಯವರ ಒತ್ತಾಯಕ್ಕೆ ಮಣಿದು ಗೀತಾ ಎಂಬುವರನ್ನು ಮದುವೆಯಾಗಿದ್ದರು. ಗೀತಾ ಮೊದಲ ಎರಡು ಮದುವೆಗಳನ್ನು ಮುಚ್ಚಿಟ್ಟು ಮಹಾಂತೇಶ್ರನ್ನು 3ನೇ ಮದುವೆಯಾಗಿರುವುದು ಬಯಲಾಗಿದೆ.
ನವಲಗುಂದ ತಾಲೂಕಿನ ಗುಡಿಸಾಗರ್ ಗ್ರಾಮದ ಗೀತಾ 2014ರ ಸೆಪ್ಟೆಂಬರ್ 15ರಂದು ಮಹಾಂತೇಶ್ರನ್ನು ಮದುವೆಯಾಗಿದ್ದಾರೆ. ಆದರೆ 2015ರಲ್ಲಿ ಗೀತಾಗೆ ತಮ್ಮ 2ನೇ ಮದುವೆಯಿಂದ ವಿಚ್ಛೇದನ ಸಿಕ್ಕಿದೆ. ಮೊದಲು ಪೊಲೀಸ್ ಅಧಿಕಾರಿಯನ್ನು ಮದುವೆಯಾಗಿದ್ದ ಗೀತಾ ನಂತರ ದೆಹಲಿ ಉದ್ಯಮಿಯನ್ನು ಮದುವೆಯಾಗಿದ್ದರು, ಅವರಿಂದಲೂ ವಿಚ್ಛೇದನ ಪಡೆದು 3ನೇ ಮದುವೆಯಾಗಿದ್ದರು.
3ನೇ ಪತಿ ಮಹಾಂತೇಶ್ ಈಗ ಗೀತಾ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾರೆ.
