ಬೆಂಗಳೂರು(ಸೆ.19): ಈ ಸುಂದರಿ ನೋಡಲು ಮನಮೋಹಕ, ಅತಿ ಸುಂದರಿ ಆದರೆ ಈಕೆಯ ಕಸುಬು ಪುರುಷರನ್ನು ಆಕರ್ಷಿಸಿ ಮದುವೆಯಾಗುವುದು ಹಾಗೂ ವಂಚಿಸಿ ದುಡ್ಡನ್ನು ಲಪಟಾಯಿಸುವುದು. ಮೋಸ ಮಾಡಿದ ಈಕೆಯ ಹೆಸರು ಯಾಸ್ಮೀನ್ ಬಾನು. 7 ಮಂದಿಯನ್ನು ಮದುವೆಯಾಗಿರುವ ಈಕೆ ಎಲ್ಲರಿಂದ ಹಣ ಪೀಕಿ ಕೈಕೊಟ್ಟಿದ್ದಾಳೆ.

ಇಮ್ರಾನ್, ಜೈದ್ ಸೇಟ್ ಅಫ್ಜಲ್ ಪಾಷಾ, ಶೋಯಬ್, ಸಿರಾಜ್, ಅಫ್ಜಲ್, ಆಸೀಫ್ ಈ ಸುಂದರಿಯ ಗಂಡಂದಿರು. ಈಕೆ ನನಗೆ ಮೋಸ ಮಾಡಿ ಹಣ ವಂಚಿಸಿದ್ದಾಳೆ ಎಂದು ನಾಲ್ಕನೆ ಗಂಡ ಅಪ್ಜಲ್ ಕೆಜಿ ಹಳ್ಳಿ ಠಾಣೆಗೆ ದೂರು ದಾಖಲಿಸಿದ್ದಾನೆ. ಮೊದಲ ಗಂಡ ಇಮ್ರಾನ್ ದೂರು ಕೊಡಲು ಮುಂದಾದಾಗ ಆತನ ಮೇಲೆ ಹಲ್ಲೆ ಮಾಡಿಸಿದ್ದಾಳೆ.