ಐಎಎಸ್ ಅಧಿಕಾರಿಯೊಬ್ಬರ ಮಗಳನ್ನು ಹಿಂಬಾಲಿಸಿ ಹಾಗೂ ಕಿಡ್ನಾಪ್ ಮಾಡುವುದಕ್ಕೆ ಪ್ರಯತ್ನಿಸಿದ್ದಕ್ಕಾಗಿ  ಹರ್ಯಾಣ ಬಿಜೆಪಿ ಮುಖ್ಯಸ್ಥ ಸುಭಾಷ್ ಬಾರಲಾ ಪುತ್ರ ವಿಕಾಸ್ ಬಾರಲಾ ಹಾಗೂ ಅವರ ಸ್ನೇಹಿತ ಆಶೀಶ್ ಕುಮಾರನ್ನು ಪೊಲೀಸರು ಬಂಧಿಸಿದ್ದಾರೆ. ಬಿಗಿ ಭದ್ರತೆಯೊಂದಿಗೆ ವಿಕಾಸ್’ರನ್ನು ಕರೆದೊಯ್ಯಲಾಗಿದೆ.

ನವದೆಹಲಿ (ಆ.09): ಐಎಎಸ್ ಅಧಿಕಾರಿಯೊಬ್ಬರ ಮಗಳನ್ನು ಹಿಂಬಾಲಿಸಿ ಹಾಗೂ ಕಿಡ್ನಾಪ್ ಮಾಡುವುದಕ್ಕೆ ಪ್ರಯತ್ನಿಸಿದ್ದಕ್ಕಾಗಿ ಹರ್ಯಾಣ ಬಿಜೆಪಿ ಮುಖ್ಯಸ್ಥ ಸುಭಾಷ್ ಬಾರಲಾ ಪುತ್ರ ವಿಕಾಸ್ ಬಾರಲಾ ಹಾಗೂ ಅವರ ಸ್ನೇಹಿತ ಆಶೀಶ್ ಕುಮಾರನ್ನು ಪೊಲೀಸರು ಬಂಧಿಸಿದ್ದಾರೆ. ಬಿಗಿ ಭದ್ರತೆಯೊಂದಿಗೆ ವಿಕಾಸ್’ರನ್ನು ಕರೆದೊಯ್ಯಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಾಳೆ ಇವರಿಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿಗಳಾದ ವಿಕಾಸ್ ಬಾರಲಾ ಹಾಗೂ ಅವರ ಸ್ನೇಹಿತರನ್ನು ವಿಚಾರಣೆಗೆ ಕರೆಸಿದ್ದೆವು. ಇದೊಂದು ಸುದೀರ್ಘ ವಿಚಾರಣೆಯಾಗಿತ್ತು. ಇದರಲ್ಲಿ ಹಲವಾರು ವಿಚಾರಗಳು ಹೊರಬಂದಿವೆ. ಹಾಗಾಗಿ ನಾವು ಇವರನ್ನು ಬಂಧಿಸಲು ನಿರ್ಧರಿಸಿದೆವು. ನಾಳೆ ಇವರಿಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುತ್ತೇವೆ. ತನಿಖೆಯ ಹೆಚ್ಚಿನ ವಿವರಗಳನ್ನು ಇದೀಗಲೇ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಡಿಜಿಪಿ ಟಿಎಸ್ ಲೂತ್ರಾ ಹೇಳಿದ್ದಾರೆ.

(ಫೋಟೋ ಕೃಪೆ: ಇಂಡಿಯನ್ ಎಕ್ಸ್'ಪ್ರೆಸ್)