ನೊಂದ ಕೆಲವು ವಿದ್ಯಾರ್ಥಿಗಳು ಸುವರ್ಣ ನ್ಯೂಸ್ ಬಳಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ವಾಹಿನಿಯು ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸುವ ಸಲುವಾಗಿ 'ಕನಸು ಕೊಂದ ಸರ್ಕಾರ' ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

ಬೆಂಗಳೂರು(ಆ.29): ಅಧಿಕಾರಿಯ ಬೇಜಾವಾಬ್ದಾರಿಯಿಂದ ಮೀಸಲಾಗಿದ್ದ ಮೆಡಿಕಲ್ ಸೀಟ್ ಕೈತಪ್ಪಿರುವ ಸೀಟ್'ಅನ್ನು ಮತ್ತೆ ಕೊಡಿಸಿ ಎಂದು ಕೇಳಿದ್ದಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಸರಿಯಾದ ಉತ್ತರ ನೀಡದೆ ಸ್ಟುಡಿಯೋದಿಂದ ಎದ್ದು ಹೋಗಿದ್ದಾರೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಗಣೇಶ ಹಬ್ಬದ ರಜೆ ದಿನಗಳ ಸಮಯದಲ್ಲಿಯೇ ಅಂದರೆ ಮೆಡಿಕಲ್ ಸೀಟ್ ಹಂಚಿಕೆಗೆ ಕೌನ್ಸೆಲಿಂಗ್ ನಡೆಸಿತ್ತು. ಆಗಸ್ಟ್ 24ರಂದು ರಾತ್ರಿ ಸುಮಾರು 8ಗಂಟೆಗೆ ಸುತ್ತೊಲೆಯೊಂದನ್ನು ಹೊರಡಿಸಿತ್ತು. ಅಗಸ್ಟ್ 26, 27 ರಂದು ಮೆಡಿಕಲ್​ ಸೀಟ್​ಗಳ ಆಕಾಂಕ್ಷಿಗಳಿಗೆ ಸೀಟ್ ಹಂಚಿಕೆ ಮಾಡಲಾಗುತ್ತದೆ ತಿಳಿಸಿತ್ತು. ಅಲ್ಲದೆ ಕೌನ್ಸೆಲಿಂಗ್ ಗೆ ಬರುವಾಗ ಬ್ಯಾಂಕ್ ನಿಂದ ಡಿಡಿ ತಗೊಂಡು ಬರಬೇಕು ಅಂತಲೂ ಸುತ್ತೋಲೆಯಲ್ಲಿ ಹೇಳಲಾಗಿತ್ತು. ಇದು ಹೊರ ರಾಜ್ಯ ವಿದ್ಯಾರ್ಥಿಗಳಿಗೆ ಅನ್ವಯವಾಗ ಬ್ಯಾಂಕ್​ ರಜೆ ದಿನ ಆನ್​ಲೈನ್​ ಮೂಲಕ 6 ಲಕ್ಷ 30 ಸಾವಿರ ಪಾವತಿಸುವಂತೆ ಹಣ ಪಾವತಿಸುವಂತೆ ಕೆಇಎ ವಿದ್ಯಾರ್ಥಿಗಳಿಗೆ ಸೂಚನೆ ನೀಡಿತ್ತು. ಆದರೆ ವಿದ್ಯಾರ್ಥಿನಿಯೊಬ್ಬರು ಅಷ್ಟು ಮೊತ್ತದ ಹಣವನ್ನು 2 ಕಾರ್ಡ್'ನಲ್ಲಿ ಇಡಲು ಸಾಧ್ಯವಾಗಿಲ್ಲ. ಮೊದಲು ಕನಫರ್ಮ್​ ಆಗಿದ್ದ ಸೀಟು ನಂತರ ಕ್ಯಾನ್ಸಲ್​ ಆಗಿದೆ.

ನೊಂದ ಕೆಲವು ವಿದ್ಯಾರ್ಥಿಗಳು ಸುವರ್ಣ ನ್ಯೂಸ್ ಬಳಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ವಾಹಿನಿಯು ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸುವ ಸಲುವಾಗಿ 'ಕನಸು ಕೊಂದ ಸರ್ಕಾರ' ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ವಿದ್ಯಾರ್ಥಿಗಳ ಜೊತೆಗೆ ಸಚಿವರನ್ನು ಮಾತುಕತೆಗೆ ಆಹ್ವಾನಿಸಿತ್ತು. ವಿದ್ಯಾರ್ಥಿಗಳು ತಮಗೆ ನ್ಯಾಯ ದೊರಕಿಸಿ ಎಂದು ಕೇಳಿದ್ದಕ್ಕೆ ಹಾರಿಕೆಯ ಉತ್ತರ ನೀಡಿದ ಸಚಿವ ಶರಣ್ ಪ್ರಕಾಶ್ ಪಾಟೀಲ್ ಸ್ಪೀಕರ್ ತೆಗೆದು ನೇರ ಕಾರ್ಯಕ್ರಮದಿಂದಲೇ ಹೊರ ಹೋಗಿದ್ದಾರೆ. ಇದರೊಂದಿಗೆ ರಾಜ್ಯ ಅರ್ಹ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿ ಪರೋಕ್ಷವಾಗಿ ಅನ್ಯ ರಾಜ್ಯದ ವಿದ್ಯಾರ್ಥಿಗಳಿಗೆ ಸೀಟ್ ದೊರಕಿಸುವ ಹುನ್ನಾರವಾಗಿದೆ.