2022ರೊಳಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಗುರಿ ಹೊಂದಿರುವ ಕೇಂದ್ರ ಸರ್ಕಾರ, ಈ ನಿಟ್ಟಿನಲ್ಲಿ ಪಶುಗಳಿಗೂ ಆಧಾರ್ ರೀತಿಯ ಸಂಖ್ಯೆ ನೀಡಲು ಮುಂದಾಗಿದೆ.

ನವದೆಹಲಿ: 2022ರೊಳಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಗುರಿ ಹೊಂದಿರುವ ಕೇಂದ್ರ ಸರ್ಕಾರ, ಈ ನಿಟ್ಟಿನಲ್ಲಿ ಪಶುಗಳಿಗೂ ಆಧಾರ್ ರೀತಿಯ ಸಂಖ್ಯೆ ನೀಡಲು ಮುಂದಾಗಿದೆ. ದೇಶದಲ್ಲಿರುವ 4 ಕೋಟಿ ಹಸುಗಳನ್ನು ಈ ಯೋಜನೆಯಲ್ಲಿ ಒಳಪಡಿಸಿಕೊಳ್ಳುವ ನಿಟ್ಟಿನಲ್ಲಿ ಬಜೆಟ್‌ನಲ್ಲಿ 50 ಕೋಟಿ ರು. ಮೀಸಲಿಡಲಾಗಿದೆ.

‘ಗೋವಿನ ತಳಿ, ವಯಸ್ಸು, ಲಿಂಗ, ಎತ್ತರ ಮತ್ತು ದೇಹದ ಮೇಲಿನ ವಿಶೇಷ ಗುರುತುಗಳನ್ನೊಳಗೊಂಡ ಯಾವುದೇ ಕಾರಣಕ್ಕೂ ತಿರುಚಲು ಅಸಾಧ್ಯವಾದ ‘ಪಶು ಸಂಜೀವಿನಿ’ ಎಂಬ ಯುಐಡಿ ತಂತ್ರಜ್ಞಾನವನ್ನು ಇಲಾಖೆ ಈಗಾಗಲೇ ಪಡೆದುಕೊಂಡಿದೆ,’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.