ನವದೆಹಲಿ(ಡಿ.13): ಸಮಸ್ತ ಭಾರತೀಯರಿಗೆ ಅತ್ಯಂತ ಖುಷಿಯ ವಿಚಾರವೊಂದನ್ನು ಕೇಂದ್ರ ಸರ್ಕಾರ ನೀಡಿದೆ. ಅದೇನಪ್ಪ ಅಂತಹ ಖುಷಿ ವಿಚಾರ ಅಂತೀರಾ. ಕೇಂದ್ರ ಸರ್ಕಾರ ಶೀಘ್ರದಲ್ಲೇ ಹೊಸ 100 ರೂ. ನಾಣ್ಯಗಳನ್ನು ಟಂಕಿಸಲಿದ್ದು, ಇದರಲ್ಲಿ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಚಿತ್ರ ಮುದ್ರಿಸಲಾಗುತ್ತದೆ.

ಹೌದು, ಇದೇ ಡಿಸೆಂಬರ್ 25 ರಂದು ಮಾಜಿ ಪ್ರಧಾನಿ, ಅಜಾತಶತ್ರು  ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ 94ನೇ ಜನ್ಮ ಜಯಂತಿ ಇದ್ದು, ಈ ಹಿನ್ನೆಲೆಯಲ್ಲಿ ಹೊಸ 100 ರೂ. ನಾಣ್ಯಗಳನ್ನು ಬಿಡುಗಡೆ ಮಾಡಲಾಗುತ್ತದೆ.

ಈ ನಾಣ್ಯಗಳ ಹಿಂಬದಿಯಲ್ಲಿ ವಾಜಪೇಯಿ ಅವರ ಚಿತ್ರ ಮುದ್ರಿತವಾಗಿರಲಿದ್ದು, ದೇವನಾಗರಿ ಲಿಪಿ ಮತ್ತು ಇಂಗ್ಲೀಷ್‌ನಲ್ಲಿ ಅಟಲ್ ಬಿಹಾರಿ ವಾಜಪೇಯಿ ಎಂದು ಬರೆಯಲಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.