ಆಧಾರ್ ಕಾರ್ಡನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಲು ಡಿ. 31 ಕ್ಕೆ ನೀಡಲಾಗಿದ್ದ ಗಡುವನ್ನು ಕೇಂದ್ರ ಸರ್ಕಾರ ಅನಿರ್ದಿಷ್ಟಾವಧಿಗೆ ಮುಂದೂಡಿದೆ.
ನವದೆಹಲಿ (ಡಿ.13): ಆಧಾರ್ ಕಾರ್ಡನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಲು ಡಿ. 31 ಕ್ಕೆ ನೀಡಲಾಗಿದ್ದ ಗಡುವನ್ನು ಕೇಂದ್ರ ಸರ್ಕಾರ ಅನಿರ್ದಿಷ್ಟಾವಧಿಗೆ ಮುಂದೂಡಿದೆ.
ಗಡುವನ್ನು ಅನಿರ್ದಿಷ್ಟಾವಧಿಗೊಳಿಸಿರುವ ಬಗ್ಗೆ ವಿತ್ತ ಸಚಿವಾಲಯ ಸುತ್ತೋಲೆ ಹೊರಡಿಸಿದೆ. ಸಂಬಂಧಪಟ್ಟವರೊಂದಿಗೆ ಸಮಾಲೋಚನೆ ನಡೆಸಿ ಆ ಬಳಿಕ ಗಡುವು ನಿಗದಿಪಡಿಸುವುದಾಗಿ ವಿತ್ತ ಸಚಿವಾಲಯ ಹೇಳಿದೆ.
ಆಧಾರ್ ಕಡ್ಡಾಯಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು ಸುಪ್ರೀಂಕೋ'ನ ಪಂಚ ನ್ಯಾಯಾಧೀಶರ ಪೀಠ ಗುರುವಾರ ವಿಚಾರಣೆ ನಡೆಸಲಿದೆ.
