ಕೇಂದ್ರ ಸರ್ಕಾರದ ನೋಟು ನಿಷೇಧ ಕ್ರಮವನ್ನು ಜನ-ವಿರೋಧಿಯೆಂದು ಬಣ್ಣಿಸಿರುವ ಪ್ರತಿಪಕ್ಷಗಳು ಸಂಸತ್ತಿನಲ್ಲೂ, ಹೊರಗೂ ಪ್ರತಿಭಟಿಸುತ್ತಾ ಬಂದಿವೆ.
ನವದೆಹಲಿ (ನ.28):ಹೆಚ್ಚುತ್ತಿರುವ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ನೋಟು ಅಮಾನ್ಯ ಕ್ರಮವನ್ನು ಸಮರ್ಥವಾಗಿ ನಿರ್ವಹಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಮುಖ್ಯಮಂತ್ರಿಗಳ ಉಪಸಮಿತಿಯನ್ನು ರಚಿಸಲು ನಿರ್ಧರಿಸಿದೆ.
ಕೇಂದ್ರ ಸರ್ಕಾರದ ನೋಟು ನಿಷೇಧ ಕ್ರಮವನ್ನು ಜನ-ವಿರೋಧಿಯೆಂದು ಬಣ್ಣಿಸಿರುವ ಪ್ರತಿಪಕ್ಷಗಳು ಸಂಸತ್ತಿನಲ್ಲೂ, ಹೊರಗೂ ಪ್ರತಿಭಟಿಸುತ್ತಾ ಬಂದಿವೆ. ರಾಜ್ಯಸಭೆಯಲ್ಲಿ ಪ್ರಧಾನಿ ನರೇಂದ್ರ ಮೊದಿ ಖುದ್ದು ಬಂದು ಸ್ಪಷ್ಟೀಕರಣ ನೀಡಬೇಕೆಂದು ಅವುಗಳು ಆಗ್ರಹಿಸುತ್ತಿವೆ. ಪ್ರತಿಪಕ್ಷಗಳು ಇಂದು ದೇಶಾದಾದ್ಯಂತ ಆಕ್ರೋಶ ದವಸವನ್ನು ಆಚರಿಸುತ್ತಿವೆ.
ಬಿಜೆಪಿಯೇತರ ಮುಖ್ಯಮಂತ್ರಿಗಳ ಪೈಕಿ ಬಿಹಾರ ಸಿಎಂ ನಿತೀಶ್ ಕುಮಾರ್ ಹಾಗೂ ಒಡಿಶಾ ಸಿಎಂ ನವೀನ್ ಪಟ್ನಾಯಕ್ ಕೇಂದ್ರ ಸರ್ಕಾರದ ಕ್ರಮಕ್ಕೆ ಬೆಂಬಲವನ್ನು ಸೂಚಿಸಿದ್ದಾರೆ.
