ಹಣಕಾಸು ವರ್ಷವನ್ನು ಏಪ್ರಿಲ್- ಮಾರ್ಚ್ ಬದಲಾಗಿ ಜನವರಿ-ಡಿಸೆಂಬರ್‘ಗೆ ಬದಲಾಯಿಸುವ ಪ್ರಸ್ತಾವಿತ ಯೋಜನೆಯನ್ನು ಕೇಂದ್ರ ಸರ್ಕಾರ ಸದ್ಯಕ್ಕೆ ಕೈಬಿಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಅವಧಿಯಲ್ಲಿ ಅದು ಜಾರಿಗೊಳ್ಳುವ ಸಾಧ್ಯತೆ ವಿರಳವಾಗಿದೆ ಎಂದು ಮೂಲಗಳು ಹೇಳಿವೆ.
ನವದೆಹಲಿ: ಹಣಕಾಸು ವರ್ಷವನ್ನು ಏಪ್ರಿಲ್- ಮಾರ್ಚ್ ಬದಲಾಗಿ ಜನವರಿ-ಡಿಸೆಂಬರ್‘ಗೆ ಬದಲಾಯಿಸುವ ಪ್ರಸ್ತಾವಿತ ಯೋಜನೆಯನ್ನು ಕೇಂದ್ರ ಸರ್ಕಾರ ಸದ್ಯಕ್ಕೆ ಕೈಬಿಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಅವಧಿಯಲ್ಲಿ ಅದು ಜಾರಿಗೊಳ್ಳುವ ಸಾಧ್ಯತೆ ವಿರಳವಾಗಿದೆ ಎಂದು ಮೂಲಗಳು ಹೇಳಿವೆ.
ಹಣಕಾಸು ವರ್ಷ ಬದಲಾವಣೆಗೆ ಎಲ್ಲ ರಾಜ್ಯಗಳ ಸಮ್ಮತಿ ಬೇಕು. ಆದರೆ ಬಹುತೇಕ ರಾಜ್ಯಗಳು ಪ್ರಸ್ತುತ ವ್ಯವಸ್ಥೆಯ ಬಗ್ಗೆಯೇ ಒಲವು ಹೊಂದಿದೆ. ಅಲ್ಲದೇ, ಜನವರಿ-ಡಿಸೆಂಬರ್ ಹಣಕಾಸು ವರ್ಷ ವ್ಯವಸ್ಥೆಯಿಂದ ಹೆಚ್ಚಿನ ಪ್ರಯೋಜನಗಳು ಸರ್ಕಾರಕ್ಕೆ ಗೋಚರಿಸಿಲ್ಲ. ಹೀಗಾಗಿ ತುರ್ತಾಗಿ ಯೋಜನೆ ಜಾರಿಗೊಳಿಸಿ ಗೊಂದಲ ಮಾಡುವುದಕ್ಕಿಂತ ತಕ್ಷಣಕ್ಕೆ ಪ್ರಸ್ತಾಪ ಬದಿಗೆ ಸರಿಸುವುದು ಒಳಿತು ಎಂಬ ನಿರ್ಧಾರಕ್ಕೆ ಸರ್ಕಾರ ಬಂದಿದೆ ಎನ್ನಲಾಗಿದೆ.
ಮಧ್ಯಪ್ರದೇಶ ಈ ವ್ಯವಸ್ಥೆಯನ್ನು ಜಾರಿಗೊಳಿಸಿದ ಪ್ರಥಮ ರಾಜ್ಯವಾಗಿದೆ. ಕೇಂದ್ರದಲ್ಲೂ ಇದೇ ವ್ಯವಸ್ಥೆ ಜಾರಿಗೊಳಿಸಲು ಚಿಂತಿಸಿರುವುದಾಗಿ ಹಣಕಾಸು ಸಚವ ಅರುಣ್ ಜೇಟ್ಲಿ ಈ ಹಿಂದೆ ಲೋಕಸಭೆಯಲ್ಲಿ ಪ್ರಕಟಿಸಿದ್ದರು.
