ಮಾರ್ಕೋನಹಳ್ಳಿ ಜಲಾಶಯ, ಹೇಮಾವತಿ ಜಲಾಶಯ ವೀಕ್ಷಣೆ ಹಾಗೂ ಆ ವ್ಯಾಪ್ತಿಯಲ್ಲಿ ಬರುವ ಅಚ್ಚುಕಟ್ಟು ಪ್ರದೇಶದ ಗ್ರಾಮಗಳಿಗೆ ತೆರಳಿ ರೈತರ ಜತೆ ಸಂವಾದ ಹಾಗೂ ಮಾಹಿತಿ ಪಡೆದು ರಾತ್ರಿ ತಮಿಳುನಾಡಿನ ಮೆಟ್ಟೂರಿಗೆ ತೆರಳಲಿದೆ

ಬೆಂಗಳೂರು(ಅ. 08): ಕಾವೇರಿ ಕಣಿವೆ ಜಲಾಶಯಗಳಲ್ಲಿನ ನೀರಿನ ಸಂಗ್ರಹ ಪ್ರಮಾಣ ಹಾಗೂ ಕೃಷಿ ಚಟುವಟಿಕೆಗಳ ಬಗ್ಗೆ ಪರಿಶೀಲನೆಗೆ ಆಗಮಿಸಿರುವ ಕೇಂದ್ರದ ತಂಡ ಇವತ್ತೂ ಕೂಡ ರಾಜ್ಯದಲ್ಲಿ ಅಧ್ಯಯನ ನಡೆಸಲಿದೆ. ಮೊದಲ ದಿನವಾದ ನಿನ್ನೆ ಕೆಆರ್‌ಎಸ್‌ ವ್ಯಾಪ್ತಿಯಲ್ಲಿ ಪ್ರವಾಸ ಕೈಗೊಂಡು ಮಾಹಿತಿ ಸಂಗ್ರಹಿಸಿದೆ. ಈ ಸಂದರ್ಭದಲ್ಲಿ ಕೇಂದ್ರ ಸಮಿತಿಗೆ ರಾಜ್ಯದ ರೈತರ ಸಂಕಷ್ಟ ಹಾಗೂ ನೀರಿನ ತೀವ್ರ ಕೊರತೆಯ ಸಾಕ್ಷಾತ್‌ ದರ್ಶನ ದೊರೆಯಿತು. ನಿನ್ನೆ ಮದ್ದೂರಿನ ತಲ್ಲೂರು ಕೆರೆ, ಸೋಮನಹಳ್ಳಿ ಕೆರೆ ಪ್ರದೇಶ, ಹೆಮ್ಮನಹಳ್ಳಿ, ದೊಡ್ಡರಸೀಕೆರೆ, ಹನುಮಂತನಗರ, ಕೆ.ಎಂ.ದೊಡ್ಡಿ, ಮಾದರಹಳ್ಳಿ, ಕೆಆರ್‌ಎಸ್‌ ಜಲಾಶಯ ಸೇರಿದಂತೆ ಹಲವು ಪ್ರದೇಶಗಳಿಗೆ ಭೇಟಿ ನೀಡಿದೆ. ಇಂದು ಶನಿವಾರ ಮಾರ್ಕೋನಹಳ್ಳಿ ಜಲಾಶಯ, ಹೇಮಾವತಿ ಜಲಾಶಯ ವೀಕ್ಷಣೆ ಹಾಗೂ ಆ ವ್ಯಾಪ್ತಿಯಲ್ಲಿ ಬರುವ ಅಚ್ಚುಕಟ್ಟು ಪ್ರದೇಶದ ಗ್ರಾಮಗಳಿಗೆ ತೆರಳಿ ರೈತರ ಜತೆ ಸಂವಾದ ಹಾಗೂ ಮಾಹಿತಿ ಪಡೆದು ರಾತ್ರಿ ತಮಿಳುನಾಡಿನ ಮೆಟ್ಟೂರಿಗೆ ತೆರಳಲಿದೆ. ಇಂದು ಈ ಕೇಂದ್ರದ ತಂಡದ ವೇಳಾಪಟ್ಟಿ ವಿವರ ಇಲ್ಲಿದೆ.

ಕೇಂದ್ರದ ಅಧ್ಯಯನ - ಎರಡನೇ ದಿನ

ಬೆಳಗ್ಗೆ 9 ಗಂಟೆಗೆ: ಕೆಆರ್‌ಎಸ್‌ನಿಂದ ಹೆಲಿಕಾಪ್ಟರ್‌ ಮೂಲಕ ಕೆ.ಆರ್‌.ಪೇಟೆಗೆ ಪ್ರಯಾಣ.

ಬೆಳಗ್ಗೆ 9.30 - 10: ಹೇಮಾವತಿ ಎಡದಂಡೆ ಕಾಲುವೆ, ಮೂರ್ಖನಹಳ್ಳಿ, ತೊಂಡೇಕೆರೆ ಪ್ರದೇಶಗಳ ವೀಕ್ಷಣೆ

ಬೆಳಗ್ಗೆ 10ರಿಂದ ಮಧ್ಯಾಹ್ನ 1: ಚಿನಕುರಳಿ, ಹೇಮಗಿರಿ ಮತ್ತು ಮಂದಗೆರೆ ಅಣೆಕಟ್ಟು ಕಾಲುವೆ ಅಚ್ಚುಕಟ್ಟು ವೀಕ್ಷಿಸಿ ಹೊಳೆನರಸೀಪುರ ಮಾರ್ಗವಾಗಿ ಗೊರೂರಿಗೆ ಪ್ರಯಾಣ

ಮಧ್ಯಾಹ್ನ 2ರಿಂದ ಸಂಜೆವರೆಗೆ: ಹೇಮಾವತಿ ಡ್ಯಾಂ, ಹೇಮಾವತಿ ಬಲದಂಡೆ ಮೇಲು ಕಾಲುವೆ, ಅರಕಲಗೂಡು ಪರಿಶೀಲನೆ

ಸಂಜೆ 4.45: ಹಾಸನದಿಂದ ಹೆಲಿಕಾಪ್ಟರ್‌ ಮೂಲಕ ಬೆಂಗಳೂರಿಗೆ ಪ್ರಯಾಣ

ರಾತ್ರಿ 8 ಗಂಟೆ: ರಸ್ತೆ ಮಾರ್ಗವಾಗಿ ತಮಿಳುನಾಡಿನ ಮೆಟ್ಟೂರಿಗೆ ಪ್ರಯಾಣ