ಕಪ್ಪು ಹಣ, ಬೇನಾಮಿ ಆಸ್ತಿ ಪತ್ತೆಗೆ ನಾನಾ ಮಾರ್ಗಗಳನ್ನು ಹುಡುಕುತ್ತಿರುವ ಕೇಂದ್ರ ಸರ್ಕಾರ, ಇದೀಗ ಇಂತಹ ಆಸ್ತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಸಾರ್ವಜನಿಕರ ಸಹಭಾಗಿತ್ವಕ್ಕೆ ತೀರ್ಮಾನಿಸಿದೆ. ಇದಕ್ಕೆಂದೇ ಬೇನಾಮಿ ಆಸ್ತಿದಾರರ ನಿಖರ ಮಾಹಿತಿ ನೀಡಿದವರಿಗೆ ಕನಿಷ್ಠ 15 ಲಕ್ಷ ರು.ನಿಂದ 1 ಕೋಟಿ ರು. ವರೆಗೆ ಬಹುಮಾನ ನೀಡಲು ತೀರ್ಮಾನಿಸಿದೆ.

ನವದೆಹಲಿ(ಸೆ.23): ಕಪ್ಪು ಹಣ, ಬೇನಾಮಿ ಆಸ್ತಿ ಪತ್ತೆಗೆ ನಾನಾ ಮಾರ್ಗಗಳನ್ನು ಹುಡುಕುತ್ತಿರುವ ಕೇಂದ್ರ ಸರ್ಕಾರ, ಇದೀಗ ಇಂತಹ ಆಸ್ತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಸಾರ್ವಜನಿಕರ ಸಹಭಾಗಿತ್ವಕ್ಕೆ ತೀರ್ಮಾನಿಸಿದೆ. ಇದಕ್ಕೆಂದೇ ಬೇನಾಮಿ ಆಸ್ತಿದಾರರ ನಿಖರ ಮಾಹಿತಿ ನೀಡಿದವರಿಗೆ ಕನಿಷ್ಠ 15 ಲಕ್ಷ ರು.ನಿಂದ 1 ಕೋಟಿ ರು. ವರೆಗೆ ಬಹುಮಾನ ನೀಡಲು ತೀರ್ಮಾನಿಸಿದೆ.

ಈ ಯೋಜನೆ ಈಗ ಕೇಂದ್ರ ವಿತ್ತ ಸಚಿವಾಲಯದ ಪರಿಶೀಲನೆಯಲ್ಲಿದೆ. ಒಮ್ಮೆ ಇದಕ್ಕೆ ಅನುಮೋದನೆ ದೊರಕಿತೆಂದರೆ ಅಕ್ಟೋಬರ್ ಅಂತ್ಯ ಅಥವಾ ನವೆಂಬರ್ ಮೊದಲನೇ ವಾರದಲ್ಲಿ ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ), ಯೋಜನೆಯನ್ನು ಘೋಷಿಸುವ ನಿರೀಕ್ಷೆಯಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ಹೇಳಿದ್ದಾರೆ.

ಕಳೆದ ವರ್ಷವೇ ಬೇನಾಮಿ ಆಸ್ತಿ ಕಾಯ್ದೆಗೆ ತಿದ್ದುಪಡಿ ತಂದು ಕಠಿಣ ರೂಪ ನೀಡಲಾಗಿತ್ತು. ಆದರೆ ಬೇನಾಮಿ ಆಸ್ತಿ ಬಗ್ಗೆ ಮಾಹಿತಿ ನೀಡಿದವರಿಗೆ ಸೂಕ್ತ ಬಹುಮಾನದ ಬಗ್ಗೆ ಯಾವುದೇ ಉಲ್ಲೇಖವಿರಲಿಲ್ಲ.

ಹೀಗಾಗಿ ಸುಲ‘ವಾಗಿ ಇಂಥ ಆಸ್ತಿಪಾಸ್ತಿಗಳನ್ನು ಪತ್ತೆ ಹಚ್ಚಲು ಆಕರ್ಷಕ ಬಹುಮಾನದ ಉಪಕ್ರಮಕ್ಕೆ ಕೇಂದ್ರ ಮುಂದಾಗಿದೆ. ‘ಒಂದೊಮ್ಮೆ ಮಾಹಿತಿ ನೀಡಿದರೆ ಮಾಹಿತಿದಾರರ ವಿವರವನ್ನು ಬಹಿರಂಗಪಡಿಸದೇ ಇಲಾಖೆ ಗೌಪ್ಯವಾಗಿಡಲಿದೆ. ಅವರು ಯಾವುದೇ ಭಯ ಪಡಬೇಕಿಲ್ಲ’ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.