Asianet Suvarna News Asianet Suvarna News

ಕಾಶ್ಮೀರ ಅಭಿ​ವೃ​ದ್ಧಿಗೆ 1 ಲಕ್ಷ ಕೋಟಿ ಪ್ಯಾಕೇಜ್‌?

ಕಾಶ್ಮೀರ ಅಭಿ​ವೃ​ದ್ಧಿಗೆ 1 ಲಕ್ಷ ಕೋಟಿ ಪ್ಯಾಕೇಜ್‌?| 370 ವಿಧಿ ರದ್ದಾದ ಬಳಿಕ ಕಾಶ್ಮೀ​ರಕ್ಕೆ ಬಂಪರ್‌ ಅನುದಾನ ಘೋಷಣೆ ಸಾಧ್ಯತೆ| ಸ್ವಿಜರ್‌ಲೆಂಡ್‌ ಮಾದ​ರಿ​ಯಲ್ಲಿ ಪ್ರವಾಸೋದ್ಯಮ ಅಭಿ​ವೃ​ದ್ಧಿಗೆ ಚಿಂತ​ನೆ

Central Govt May Release 1 lakh Crore Rupees For The development Of Jammu Kashmir
Author
Bangalore, First Published Aug 8, 2019, 8:20 AM IST

ನವ​ದೆ​ಹ​ಲಿ[ಆ.08]: 370 ನೇ ವಿಧಿ ರದ್ದು ಮಾಡಿ ಜಮ್ಮು ಕಾಶ್ಮೀ​ರವನ್ನು ಎರಡು ಕೇಂದ್ರಾ​ಡ​ಳಿತ ಪ್ರದೇ​ಶ​ವ​ನ್ನಾಗಿ ಮಾಡಿ​ದ್ದ ಕೇಂದ್ರ ಸಕಾ​ರ್‍ರ, ಭಾರ​ತದ ಸ್ವರ್ಗ​ವನ್ನು ಅಭಿ​ವೃದ್ದಿ ಮಾಡುವ ಮಹ​ತ್ವದ ನಿರ್ಧಾರ ಕೈಗೊಂಡಿದೆ. ಸದಾ ಬಾಂಬು ಗುಂಡು​ಗಳ ಸದ್ದು ಮಾತ್ರ ಕೇಳು​ತ್ತಿದ್ದ ಹಸಿರ ಕಣಿ​ವೆ​ಯಲ್ಲಿ ಅಭಿ​ವೃದ್ದಿ ಶಕೆಗೆ ಮುನ್ನುಡಿ ಬರೆ​ಯಲು ಕೇಂದ್ರ ನಿರ್ಧ​ರಿ​ಸಿದ್ದು ಒಂದು ಲಕ್ಷ ಕೋಟಿಯ ಪ್ಯಾಕೇಜ್‌ ಘೋಷ​ಣೆ ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ಈಗಾ​ಗ​ಲೇ ನಿರ್ಧಾರ ಕೈಗೊ​ಳ್ಳ​ಲಾ​ಗಿದ್ದು, ಇನ್ನೆ​ರಡು ದಿನ​ಗ​ಳಲ್ಲಿ ಈ ಬಗ್ಗೆ ಪ್ರಧಾನಿ ಘೋಷಣೆ ಮಾಡುವ ಸಾಧ್ಯತೆ ಇದೆ.

370 ಹಾಗೂ 35ಎ ವಿಧಿ ರದ್ದು ಮಾಡುವ ಮೂಲಕ ಜಮ್ಮು- ಕಾಶ್ಮೀರ ಹಾಗೂ ಲಡಾಖ್‌ ಮುಖ್ಯ​ವಾ​ಹಿ​ನಿಗೆ ಬಂದಿ​ದ್ದು, ಈ ಎರ​ಡೂ​ ಕೇಂದ್ರಾ​ಡ​ಳಿತ ಪ್ರದೇ​ಶದ ಅಭಿ​ವೃ​ದ್ದಿಗೆ ಒಂದು ಲಕ್ಷ ಕೋಟಿ ಅನು​ದಾ​ನ ಬಿಡು​ಗಡೆ ಮಾಡುವ ಸಾಧ್ಯತೆ ಇದೆ. ಇದ​ರಲ್ಲಿ 2015 ನವೆಂಬ​ರ್‌ನಲ್ಲಿ ಘೋಷ​ಣೆ​ಯಾದ ಅಪೂರ್ಣ ಅಭಿ​ವೃದ್ಧಿ ಕಾರ್ಯ​ಗಳೂ ಕೂಡ ಸೇರಿದ್ದು, ದರಲ್ಲಿ ಒಟ್ಟು 80,068 ಕೋಟಿ ರುಪಾ​ಯಿ ಖರ್ಚಾ​ಗದೇ ಉಳಿ​ದಿದೆ ಎಂದು ಅಧಿ​ಕಾ​ರಿ​ಯೊ​ಬ್ಬರು ಹೇಳಿ​ದ್ದಾರೆ.

ಪ್ರವಾ​ಸೋ​ದ್ಯಮ ಕಾಶ್ಮೀ​ರದ ಜೀವಾ​ಳ​ವಾ​ಗಿದ್ದು, ಮೋದಿ ಸಕಾ​ರ್‍ರ ಕಾಶ್ಮೀ​ರ​ವನ್ನು ಸ್ವಿಜರ್‌ಲೆಂಡ್‌ ಮಾದ​ರಿ ಅಭಿ​ವೃ​ದ್ದಿ ಪಡಿ​ಸು​ವುದಕ್ಕೆ ಮುಂದಾ​ಗಿದೆ. ಇದರ ಜತೆಗೆ ಕಾಶ್ಮೀರದ ಪ್ರಮುಖ ಉದ್ಯಮ ರೇಷ್ಮೆ ತೋಟಗಾರಿಕೆ ಮತ್ತು ಆಹಾರ ಸಂಸ್ಕರಣೆಗೆ ಹೆಚ್ಚಿನ ಆದ್ಯತೆ ನೀಡಿ ಕರಕುಶಲ ಹಾಗೂ ಇತರ ಮಾಲಿನ್ಯರಹಿತ ಕೈಗಾರಿಕೆಗಳ ಅಭಿ​ವೃ​ದ್ದಿಗೆ ಕಾರ್ಯ​ಸೂಚಿ ರಚಿ​ಸ​ಲಾ​ಗಿದೆ. ಮಾತ್ರ​ವ​ಲ್ಲ ನವೆಂವರ್‌ ತಿಂಗ​ಳಿ​ನಲ್ಲಿ ಕಾಶ್ಮೀ​ರ​ದಲ್ಲಿ ಹೂಡಿ​ಕೆ​ದಾ​ರರ ಸಮಾ​ವೇಶ ನಡೆಸಿ ಬಂಡ​ವಾಳ ಆಕ​ರ್ಷಿ​ಸು​ವು​ದ​ಕ್ಕೂ ಕೇಂದ್ರ ಸರ್ಕಾರ ಮುಂದಾ​ಗಿದೆ ಎಂದು ಯೋಜ​ನೆಯ ವಿವ​ರ​ಗಳ ಬಗ್ಗೆ ಅಧಿ​ಕಾ​ರಿ​ಯೊ​ಬ್ಬರು ತಿಳಿ​ಸಿ​ದ್ದಾ​ರೆ.

ಅಲ್ಲದೇ ಕೈಗಾ​ರಿ​ಕೆ​ಗ​ಳಿ​ಗೆ ಪೂರ​ಕ​ವಾದ ವಾತಾ​ವ​ರಣ ಸೃಷ್ಟಿಸಿ, ಹೊಸ ಕಂಪ​ನಿ​ಗ​ಳನ್ನೂ ಸೆಳೆಯಲು ಉದ್ದೇ​ಶಿ​ಸಿದ್ದು, ಸರ್ಕಾರಿ ಸ್ವಾಮ್ಯದ ಕೈಗಾ​ರಿ​ಗಳು ಕೂಡ ಕಾಶ್ಮೀ​ರ​ದಲ್ಲಿ ತಲೆ ಎತ್ತ​ಲಿವೆ. ಹಸಿರು ಕೈಗಾ​ರಿ​ಕೆಗೆ ಹೆಚ್ಚಿನ ಆದ್ಯತೆ ನೀಡಿ ಕಾಶ್ಮೀ​ರದ ಸೌಂದ​ರ್ಯಕ್ಕೆ ತೊಡ​ಕಾ​ಗ​ದಂತೆ ನೋಡಿ​ಕೊ​ಳ್ಳುವ ಬಗ್ಗೆ ಗಮನ ಹರಿ​ಸ​ಲಾ​ಗಿದೆ ಎಂದು ಅಧಿ​ಕಾ​ರಿ​ಗಳು ಹೇಳಿದ್ದಾರೆ. 72 ವರ್ಷ​ಗ​ಳಿಂದ ಚಾಲ್ತಿ​ಯ​ಲ್ಲಿದ್ದ 370 ವಿಧಿ ಇತಿ​ಹಾಸ ಸೇರು​ವು​ದ​ರೊಂದಿಗೆ ಕಾಶ್ಮೀ​ರಿ​ಗಳು ಹೊರೆತುಪಡಿಸಿ ಇತ​ರರು ಯಾರೂ ಉದ್ಯಮ ಆರಂಭಿ​ಸು​ವಂತಿಲ್ಲ ಎಂಬ ಕಾನೂನು ರದ್ದಾ​ಗಿತ್ತು. ಹೊರ​ಗಿ​ನ​ವ​ರಿಗೂ ಉದ್ಯಮ ನಡೆ​ಸಲು ಮುಕ್ತ​ವಾ​ಗಿದ್ದು, ಈಗಾ​ಗಲೇ ಹಲವು ಉದ್ಯ​ಮಿ​ಗಳು ಕಾಶ್ಮೀ​ರ​ದಲ್ಲಿ ಉದ್ಯಮ ಸ್ಥಾಪಿ​ಸಲು ಮುಂದೆ ಬಂದಿದ್ದಾರೆ. ಇದ​ರೊಂದಿಗೆ ಪ್ರಾದೇ​ಶಿಕ ಅಸ​ಮ​ತೋ​ಲನ ನೀಗು​ವು​ದ​ರೊಂದಿಗೆ ಸ್ಥಳೀಯ ಮಟ್ಟ​ದಲ್ಲಿ ಉದ್ಯೋ​ಗವೂ ಸೃಷ್ಠಿ​ಯಾ​ಗು​ತ್ತದೆ ಎಂದು ತಜ್ಞರು ಅಭಿ​ಪ್ರಾ​ಯ ಪಟ್ಟಿ​ದ್ದ​ರು.

Follow Us:
Download App:
  • android
  • ios