ಹಜ್ ಯಾತ್ರೆಗೆ ಅರ್ಜಿ ಸಲ್ಲಿಸಲು ದಿವ್ಯಾಂಗರಿಗೆ ನಿಷೇಧ ನೀತಿಯನ್ನು ರದ್ದುಗೊಳಿಸಲಾಗುವುದು ಎಂದು ಕೇಂದ್ರ ಅಲ್ಪಸಂಖ್ಯಾತರ ಸಚಿವಾಲಯದ ಮೂಲಗಳು ತಿಳಿಸಿವೆ.
ನವದೆಹಲಿ (ಜ.07): ಹಜ್ ಯಾತ್ರೆಗೆ ಅರ್ಜಿ ಸಲ್ಲಿಸಲು ದಿವ್ಯಾಂಗರಿಗೆ ನಿಷೇಧ ನೀತಿಯನ್ನು ರದ್ದುಗೊಳಿಸಲಾಗುವುದು ಎಂದು ಕೇಂದ್ರ ಅಲ್ಪಸಂಖ್ಯಾತರ ಸಚಿವಾಲಯದ ಮೂಲಗಳು ತಿಳಿಸಿವೆ. ತಾರತಮ್ಯವಿರುವ ಹಜ್ ಮಾರ್ಗಸೂಚಿ ವಿರೋಧಿಸಿ ದಿವ್ಯಾಂಗರ ಹಕ್ಕುಗಳ ಪರವಾದ ಗುಂಪುಗಳ ಪ್ರತಿಭಟನೆಯ ಹಿನ್ನೆಲೆಯಲ್ಲಿ ಸರ್ಕಾರ, ಈ ನಿಯಮಗಳ ಬದಲಾವಣೆಗೆ ಉದ್ದೇಶಿಸಿದೆ.
ಈ ಸಂಪ್ರದಾಯ ಕಳೆದ 60 ವರ್ಷಗಳಿಂದಲೂ ಜಾರಿಯಲ್ಲಿದೆ. ಈ ವರ್ಷದಿಂದ ದಿವ್ಯಾಂಗರೂ ಅರ್ಜಿ ಸಲ್ಲಿಸಬಹುದು. ದಿವ್ಯಾಂಗ ವ್ಯಕ್ತಿಯ ಹಕ್ಕುಗಳ ಕಾಯ್ದೆ ಗಮನದಲ್ಲಿಟ್ಟುಕೊಂಡು 2018-2022 ಮಾರ್ಗಸೂಚಿಗಳನ್ನು ರೂಪಿಸಲಾಗಿದೆ.
