ಪೆಟ್ರೋಲ್, ಡೀಸೆಲ್ ದರ ಏರಿಕೆ ತಡೆಗೆ ಹೊಸ ಯೋಜನೆ | ಜನಸಾಮಾನ್ಯರಿಗೆ ಅನುಕೂಲವಾಗಲೆಂದು ಪೆಟ್ರೋಲ್ ಬೆಲೆ 20 ರೂ ಇಳಿಕೆ? | ಪೆಟ್ರೋಲ್‌ಗೆ ಸೀಮೆಎಣ್ಣೆ ಬರೆಸಿ ಮಾರಲು ನಿರ್ಧಾರ?
ನವದೆಹಲಿ (ಸೆ. 04): ಪೆಟ್ರೋಲ್, ಡೀಸೆಲ್ ದರಗಳು ಏರುತ್ತಲೇ ಇದ್ದು ವಾಹನ ಸವಾರರು ಹಿಡಿಶಾಪ ಹಾಕುತ್ತಿದ್ದಾರೆ. ಹೀಗಾಗಿ ಪೆಟ್ರೋಲ್ ದರ ಇಳಿಸಲು ಸರ್ಕಾರ ಉಪಾಯವೊಂದನ್ನು ಕಂಡುಕೊಂಡಿದೆ. ಪೆಟ್ರೋಲ್ ಜೊತೆ ಸೀಮೆಣ್ಣೆ
ಬೆರೆಸಿ 20 ರು. ಕಡಿಮೆ ದರದಲ್ಲಿ ಮಾರಾಟ ಮಾಡುವಂತೆ ತೈಲ ಕಂಪನಿಗಳಿಗೆ ಸರ್ಕಾರವೇ ಸೂಚನೆ ನೀಡಿದೆ.
ಇಂದು ಮಧ್ಯರಾತ್ರಿಯಿಂದಲೇ ಈ ಪ್ರಯೋಗ ಜಾರಿಯಾಗಲಿದೆ. ಪೆಟ್ರೋಲ್ ಬಂಕ್‌ಗಳಲ್ಲಿ ಶೇ.75-25 ರ ಅನುಪಾತದಲ್ಲಿ ಪೆಟ್ರೋಲ್ ಮತ್ತು ಸೀಮೆಎಣ್ಣೆಯನ್ನು ಮಿಶ್ರಣ ಮಾಡಲಾಗುತ್ತದೆ. ಇದರಿಂದ ವಾಹನದಲ್ಲಿ ಹೆಚ್ಚಿನ ಹೊಗೆ ಬರುವುದನ್ನು ಹೊರತುಪಡಿಸಿ ಅಂತಹ ವ್ಯತಾಸವೇನೂ ಆಗುವುದಿಲ್ಲ. ಹಿಂಬದಿಯ ಸವಾರರು ಮೂಗು ಮುಚ್ಚಿಕೊಂಡು ಪ್ರಯಾಣಿಸುವಂತೆ ಸಲಹೆ ನೀಡಲಾಗಿದೆ ಎಂದು ಸುಳ್‌ಸುದ್ದಿ ಮೂಲಗಳು ತಿಳಿಸಿವೆ.
