ಕೇಂದ್ರದ ಬಜೆಟ್’ನಲ್ಲಿ ಆದಾಯ ತೆರಿಗೆ ಇಳಿಕೆ ಸಾಧ್ಯತೆ

First Published 22, Jan 2018, 9:20 AM IST
Central Budget 2018 News
Highlights

ಮುಂದಿನ 2018-19ರ ಬಜೆಟ್ ವೇಳೆ ಸಾರ್ವಜನಿಕರ ಮೇಲಿನ ತೆರಿಗೆ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆದಾಯ ತೆರಿಗೆ ಸ್ಲ್ಯಾಬ್ ಮತ್ತು ಆದಾಯ ದರಗಳನ್ನು ಕಡಿತಗೊಳಿಸುವ ಸಾಧ್ಯತೆಯಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

ನವದೆಹಲಿ: ಮುಂದಿನ 2018-19ರ ಬಜೆಟ್ ವೇಳೆ ಸಾರ್ವಜನಿಕರ ಮೇಲಿನ ತೆರಿಗೆ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆದಾಯ ತೆರಿಗೆ ಸ್ಲ್ಯಾಬ್ ಮತ್ತು ಆದಾಯ ದರಗಳನ್ನು ಕಡಿತಗೊಳಿಸುವ ಸಾಧ್ಯತೆಯಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಅಲ್ಲದೆ, ಪ್ರಸ್ತುತ ಇರುವ ಲಾಭಾಂಶ ತೆರಿಗೆ ಮೇಲೆ ಯಾವುದೇ ಬದಲಾವಣೆ ಮಾಡುವ ಸಾಧ್ಯತೆ ಇಲ್ಲ ಎಂಬುದಾಗಿಯೂ ತೆರಿಗೆ ಕನ್ಸಲ್ಟಂಟ್ ಇವೈ ಎಂಬ ಸಮೀಕ್ಷೆ ಪ್ರತಿಪಾದಿಸಿದೆ.

ಈ ಸಮೀಕ್ಷೆಯಲ್ಲಿ ಭಾಗಿಯಾದ ಶೇ.59ರಷ್ಟು ಮಂದಿ, ನೌಕರರ ಮೇಲಿನ ಹೊರೆ ಕಡಿಮೆಗೊಳಿಸಲು ನೀತಿ ಜಾರಿಗೊಳಿಸಬೇಕು ಎಂದಿದ್ದಾರೆ.

loader