ಹೊಟೇಲ್‌ಗಳ ಸ್ವಚ್ಛತೆಯ ಬಂಡವಾಳ ಗ್ರಾಹಕರ ಮುಂದಿಡಲು ಅಡುಗೆ ಕೋಣೆಗಳಲ್ಲಿ ಸಿಸಿಟಿವಿ ಅಳವಡಿಸುವುದಕ್ಕೆ ಬಿಬಿಎಂಪಿ ನಿರ್ಧರಿಸಿದೆ

ಬೆಂಗಳೂರು(ಅ.01): ಹೈಟೆಕ್ ಸಿಟಿ ಪಟ್ಟ ಕಟ್ಟಿಕೊಂಡಿರುವ ಬೆಂಗಳೂರಿನ ಹೋಟೆಲ್‌ಗಳು ಹೊರಗೆ ನೋಡುವುದಕಷ್ಟೇ ಥಳುಕು. ಒಳಗೆ ನೋಡಿದರೆ ಬರೀ ಹುಳುಕು ಎನ್ನುವ ಆರೋಪ ಇದೆ. ಇದಕ್ಕಾಗಿ ಬಿಬಿಎಂಪಿ ಹೊಸ ಐಡಿಯಾ ಮಾಡಿದೆ. ಹೊಟೇಲ್‌ಗಳ ಸ್ವಚ್ಛತೆಯ ಬಂಡವಾಳ ಗ್ರಾಹಕರ ಮುಂದಿಡಲು ಅಡುಗೆ ಕೋಣೆಗಳಲ್ಲಿ ಸಿಸಿಟಿವಿ ಅಳವಡಿಸುವುದಕ್ಕೆ ನಿರ್ಧರಿಸಿದೆ..

ಈ ನಿಯಮವನ್ನ ಈ ತಿಂಗಳ ಅಂತ್ಯದಲ್ಲಿ ಅಧಿಸೂಚನೆ ಮೂಲಕ ಹೋಟೆಲ್​ಗಳ ಮೇಲೆ ಪಾಲಿಕೆ ಹೇರಲಿದೆ.. ಕಿಚನ್​ ಸಿಸಿಟಿವಿಯ ಔಟ್​ಪುಟ್​ ಹೋಟೆಲ್​ಗೆ ಬರುವ ಗ್ರಾಹಕರು ನೋಡಲು ಅವಕಾಶ ನೀಡುವಂತೆ ಇರಬೇಕು ಎನ್ನುವುದು ಪಾಲಿಕೆ ಉದ್ದೇಶ.. ನಗರದಲ್ಲಿರುವ 1 ಲಕ್ಷಕ್ಕೂ ಹೆಚ್ಚು ಹೋಟೆಲ್​ಗಳ ಪೈಕಿ, ಶೇ.99 ರಷ್ಟು ಕಿಚನ್​ ಹೈಜೆನಿಕ್​ ಬಗ್ಗೆ ತಲೆಕೆಡಿಸಿಕೊಂಡಿಲ್ಲ.. ಹೀಗಾಗಿ, ಪಾಲಿಕೆ ಈ ನಿರ್ಧಾರಕ್ಕೆ ಬಂದಿದೆ..

ಹೋಟೆಲ್​ಗಳಲ್ಲಿ ಸಾಮಾನ್ಯವಾಗಿ ಕಿಚನ್​ಗೆ ನೋ ಎಂಟ್ರಿ ಬೋರ್ಡ್​ ಇರುತ್ತೆ.. ಹೀಗಿರೋವಾಗ ಬಿಬಿಎಂಪಿ ಅಡುಗೆ ಮನೆಯ ಸಂಪೂರ್ಣ ಮಾಹಿತಿ ಬಯಸುತ್ತಿದೆ.. ಇದಕ್ಕೆ ಹೋಟೆಲ್​ ಮಾಲೀಕರು ಸಹಕಾರಿಸ್ತಾರಾ ಅಂತ ಕಾದು ನೋಡಬೇಕಿದೆ.