ಬೆಂಗಳೂರು ಸೇರಿ ರಾಜ್ಯದ ಎಲ್ಲಾ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಬರುವ ವಾಣಿಜ್ಯ ಸಂಸ್ಥೆಗಳು ಸಾರ್ವಜನಿಕ ಸುರಕ್ಷತೆಗಾಗಿ ಸಿಸಿಟೀವಿ ಅಳವಡಿ ಸುವುದು ಇನ್ನುಮುಂದೆ ಕಡ್ಡಾಯವಾಗಲಿದೆ.
ಬೆಂಗಳೂರು(ಜೂ.22): ಬೆಂಗಳೂರು ಸೇರಿ ರಾಜ್ಯದ ಎಲ್ಲಾ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಬರುವ ವಾಣಿಜ್ಯ ಸಂಸ್ಥೆಗಳು ಸಾರ್ವಜನಿಕ ಸುರಕ್ಷತೆಗಾಗಿ ಸಿಸಿಟೀವಿ ಅಳವಡಿ ಸುವುದು ಇನ್ನುಮುಂದೆ ಕಡ್ಡಾಯವಾಗಲಿದೆ.
ಸಿಸಿಟೀವಿ ಅಳವಡಿಕೆ ಎಲ್ಲೆಲ್ಲಿ ಕಡ್ಡಾಯ?
ರಾಜ್ಯದ ವಾಣಿಜ್ಯ ಕಾರ್ಯಸಂಸ್ಥೆಗಳು, ಕೈಗಾರಿಕಾ ಸಂಸ್ಥೆಗಳು, ಧಾರ್ಮಿಕ ಸ್ಥಳಗಳು, ಶೈಕ್ಷಣಿಕ ಸಂಸ್ಥೆಗಳು, ಆಸ್ಪತ್ರೆಗಳು, ಕ್ರೀಡಾ ಸಂಕೀರ್ಣಗಳು, ರೈಲ್ವೆ ನಿಲ್ದಾಣಗಳು, ಬಸ್ ನಿಲ್ದಾಣಗಳು, ಸಂಘಟಿತ ಧಾರ್ಮಿಕ ಕೂಟಗಳು ಸೇರುವ ಸ್ಥಳ ಗಳು ಸೇರಿ ಪ್ರಮುಖ ಸ್ಥಳಗಳಲ್ಲಿ ಅವುಗಳ ಮಾಲೀಕರು ಸಿಸಿಟೀವಿ ಅಳವಡಿಸಬೇಕು. ಅಪರಾಧಗಳ ತನಿಖೆಗೆ ಅನುಕೂಲ ವಾಗುವಂತೆ ನಿಯೋಜಿತ ಪೊಲೀಸ್ ಅಧಿಕಾರಿಗಳಿಗೆ 30 ದಿನಗಳ ಅವಧಿಯ ದೃಶ್ಯಗಳನ್ನು ನೀಡುವುದಕ್ಕೆ ಸಂಗ್ರಹವಾಗಿಡಬೇಕು. ಸಿಸಿಟೀವಿ ಗಳನ್ನು ಅಳವಡಿಸಿ, ದೃಶ್ಯಗಳನ್ನು ಸಂಗ್ರಹಿಸಿಡುವಲ್ಲಿ ವಿಫಲವಾ ಗುವ ಸಂಸ್ಥೆಗಳ ಮಾಲೀಕರಿಗೆ ದಂಡ ಮತ್ತು ಶಿಕ್ಷೆ ವಿಧಿಸಲಾಗುವುದು. ಇದು ಬಿಬಿಎಂಪಿ ಮತ್ತು ರಾಜ್ಯದ ಇತರ ನಗರ ಪಾಲಿಕೆಗಳಿಗೆ ಅನ್ವಯಿಸಲಿದೆ. ಹಾಗೆಯೇ ಮುಂದೆ ಗುರುತಿಸಬಹುದಾದ ಸ್ಥಳಗಳಿಗೂ ಇದು ಅನ್ವಯವಾಗಲಿದೆ ಎಂದು ವಿಧೇಯಕದಲ್ಲಿ ತಿಳಿಸಲಾಗಿದೆ.
