ಆನ್‌ಲೈನ್‌ ಹುಡುಕಾಟದ ಸೇವೆ ಒದಗಿಸುವ ವೇಳೆ ನ್ಯಾಯ ಸಮ್ಮತವಲ್ಲದ ರೀತಿಯಲ್ಲಿ ನಡೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಮುಖ ಸರ್ಚ್ ಎಂಜಿನ್‌ ಗೂಗಲ್‌ಗೆ, ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ) 139 ಕೋಟಿ ರು.ಗಳ ಭಾರೀ ದಂಡ ವಿಧಿಸಿದೆ.

ನವದೆಹಲಿ: ಆನ್‌ಲೈನ್‌ ಹುಡುಕಾಟದ ಸೇವೆ ಒದಗಿಸುವ ವೇಳೆ ನ್ಯಾಯ ಸಮ್ಮತವಲ್ಲದ ರೀತಿಯಲ್ಲಿ ನಡೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಮುಖ ಸರ್ಚ್ ಎಂಜಿನ್‌ ಗೂಗಲ್‌ಗೆ, ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ) 139 ಕೋಟಿ ರು.ಗಳ ಭಾರೀ ದಂಡ ವಿಧಿಸಿದೆ.

ಭಾರತದಲ್ಲಿ ಆನ್‌ಲೈನ್‌ ಹುಡುಕಾಟ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಗೂಗಲ್‌, ಈ ವಿಷಯವನ್ನೇ ಮುಂದಿಟ್ಟುಕೊಂಡು ಕೆಲವೊಂದು ಸಂಸ್ಥೆಗಳ ಪರವಾಗಿ ಕಾರ್ಯನಿರ್ವಹಿಸುವ ಮೂಲಕ ನಿಯಮ ಬಾಹಿರವಾಗಿ ವರ್ತಿಸುತ್ತಿದೆ ಎಂದು ಎಲ್‌ಐಸಿ, ಮ್ಯಾಟ್ರಿಮೋನಿಯಲ್‌.ಕಾಂ ಸೇರಿದಂತೆ ಹಲವು ಕಂಪನಿಗಳು 2012ರಲ್ಲಿ ಸಿಸಿಐಗೆ ದೂರು ಸಲ್ಲಿಸಿದ್ದವು. ಈ ಕುರಿತು ವಿಚಾರಣೆ ನಡೆಸಿದ್ದ ಸಿಸಿಐ ಇದೀಗ, ಗೂಗಲ್‌ಗೆ ದಂಡ ವಿಧಿಸಿ ಆದೇಶ ಹೊರಡಿಸಿದೆ.