ವಿದ್ವತ್ ಮೇಲೆ ನಲಪಾಡ್ ಹಲ್ಲೆ ಪ್ರಕರಣ : ಆರ್.ವಿ. ದೇವರಾಜ್ ಪುತ್ರನಿಗೆ ನೋಟಿಸ್ ನೀಡಲು ಸಿಸಿಬಿ ತಯಾರಿ

First Published 11, Apr 2018, 5:14 PM IST
CCB Police notice issued RV Devaraj son for Nalapad case
Highlights

ಮತ್ತಷ್ಟು ಪ್ರಭಾವಿ ರಾಜಕಾರಣಿಗಳ ಪುತ್ರರನ್ನು ತನಿಖೆಗೊಳಪಡುವ ಸಾಧ್ಯತೆಯಿದೆ. ಚಿಕ್ಕಪೇಟೆ ಶಾಸಕ ಆರ್.ವಿ.ದೇವರಾಜ್ ಪುತ್ರ ಯುವರಾಜ್'ಗೆ ನೋಟಿಸ್ ನೀಡಲು ಸಿಸಿಬಿ ತಯಾರಿ ನಡೆಸಿದೆ.

ಬೆಂಗಳೂರು(ಏ.11):  ಉದ್ಯಮಿ ಪುತ್ರ ವಿದ್ವತ್ ಮೇಲೆ ಶಾಸಕರ ಮಗ ಮೊಹಮ್ಮದ್ ನಲಪಾಡ್ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಮತ್ತಷ್ಟು ಪ್ರಭಾವಿ ರಾಜಕಾರಣಿಗಳ ಪುತ್ರರನ್ನು ತನಿಖೆಗೊಳಪಡುವ ಸಾಧ್ಯತೆಯಿದೆ. ಚಿಕ್ಕಪೇಟೆ ಶಾಸಕ ಆರ್.ವಿ.ದೇವರಾಜ್ ಪುತ್ರ ಯುವರಾಜ್'ಗೆ ನೋಟಿಸ್ ನೀಡಲು ಸಿಸಿಬಿ ತಯಾರಿ ನಡೆಸಿದೆ. ನಿನ್ನೆ ಸಚಿವ ಮಹದೇವಪ್ಪ ಪುತ್ರ ಸುನೀಲ್ ಬೋಸ್ ಅವರಿಗೆ ವಿಚಾರಣೆ ನಡೆಸಲಾಗಿತ್ತು. ಘಟನೆ ಸಂದರ್ಭದಲ್ಲಿ ಫರ್ಜಿ ಕೆಫೆಯಲ್ಲಿದ್ದ ಸಿಸಿಟಿವಿ ಕ್ಯಾಮರಾವನ್ನು ಸಿಸಿಬಿ ವಿಚಾರಣೆಗೊಳಪಡಿಸಿತ್ತು. ಸಿಸಿಬಿ ತನಿಖಾಧಿಕಾರಿ ಅಶ್ವತ್ಥ್ ಗೌಡ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

loader