ಬೆಂಗಳೂರು(ನ.7): ಬಳ್ಳಾರಿ ಲೋಕಸಭಾ ಉಪ ಚುನಾವಣೆ ಮುಗಿಯುತ್ತಿದ್ದಂತೇ ಗಣಿಧಣಿ ಜನಾರ್ದನ ರೆಡ್ಡಿಗೆ ಸಂಕಟ ಶುರುವಾಗಿದೆ. ಉಪ ಚುನಾವಣೆ ಸಂದರ್ಭದಲ್ಲಿ ರಾಜಾರೋಷವಾಗಿ ಹೇಳಿಕೆ ನೀಡುತ್ತಿದ್ದ ರೆಡ್ಡಿ ಇದೀಗ ಜೈಲು ಸೇರುವ ಸಂಭವ ಅಧಿಕವಾಗಿದೆ.

ಹೌದು, ಹಳೆಯ ಡೀಲ್ ಪ್ರಕರಣವೊಂದು ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಉರುಳಾಗುವ ಸಾಧ್ಯತೆ ಇದೆ. ಈ ಕಾರಣಕ್ಕಾಗಿ ರೆಡ್ಡಿಯನ್ನು ಬಂಧಿಸಲು ಸಿಸಿಬಿ ಪೊಲೀಸರು ಬಲೆ ಬೀಸಿದ್ದಾರೆ.

ಜನಾರ್ದನ ರೆಡ್ಡಿ ಹಾಗೂ ಆಪ್ತ ಅಲಿಖಾನ್ ಬಂಧನಕ್ಕೆ ಸಿಸಿಬಿ ಪೊಲೀಸರು ಬಲೆ ಬೀಸಿದ್ದು, ಈಗಾಗಲೇ ದೆಹಲಿ, ಹೈದರಾಬಾದ್ ನಗರಕ್ಕೆ ಸಿಸಿಬಿ ಪೊಲೀಸರ ತಂಡ ರವಾನೆಯಾಗಿದೆ.