ಮರು ಪರೀಕ್ಷೆಗೆ ಆದೇಶಿಸಿದ ಸಿಬಿಎಸ್'ಸಿ

news | Wednesday, March 28th, 2018
Suvarna Web Desk
Highlights

ಪರೀಕ್ಷಾ ದಿನಾಂಕ ಹಾಗೂ ಇತರ ವಿವರಗಳನ್ನು ಶೀಘ್ರದಲ್ಲಿಯೇ ಸಿಬಿಎಸ್'ಸಿ ವೆಬ್'ಸೈಟ್'ನಲ್ಲಿ ಪ್ರಕಟಿಸಲಾಗುವುದು ಎಂದು ಸಿಬಿ'ಎಸ್'ಸಿ ಪ್ರಕಟಣೆ ತಿಳಿಸಿದೆ.

ನವದೆಹಲಿ(ಮಾ.28): ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ 12ನೇ ತರಗತಿಯ ಅರ್ಥಶಾಸ್ತ್ರ ಹಾಗೂ 10ನೇ ತರಗತಿಯ ಗಣಿತಶಾಸ್ತ್ರ ವಿಷಯಗಳನ್ನು ಮರು ಪರೀಕ್ಷೆ ನಡೆಸಲು ಆದೇಶಿಸಿದೆ.

ಪ್ರಶ್ನೆಪತ್ರಿಕೆಗಳ ಸೋರಿಕೆಯ ಆರೋಪ ಹಾಗೂ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಮರು ಪರೀಕ್ಷೆ ನಡೆಸಲು ಆದೇಶಿಸಲಾಗಿದೆ. ಪರೀಕ್ಷಾ ದಿನಾಂಕ ಹಾಗೂ ಇತರ ವಿವರಗಳನ್ನು ಶೀಘ್ರದಲ್ಲಿಯೇ ಸಿಬಿಎಸ್'ಸಿ ವೆಬ್'ಸೈಟ್'ನಲ್ಲಿ ಪ್ರಕಟಿಸಲಾಗುವುದು ಎಂದು ಸಿಬಿ'ಎಸ್'ಸಿ ಪ್ರಕಟಣೆ ತಿಳಿಸಿದೆ.

ಆದಾಗ್ಯೂ ಕೆಲವು ಶಿಕ್ಷಕರು, ಪೋಷಕರು ಪ್ರಶ್ನೆಪತ್ರಿಕೆ ಸೋರಿಕೆಯಾದ ಹಿನ್ನಲೆಯಲ್ಲಿ  ಮರುಪರೀಕ್ಷೆ ಹಾಗೂ ಸ್ವತಂತ್ರ ತನಿಖೆ ಕೈಗೊಳ್ಳಬೇಕೆಂದು ದೆಹಲಿ ಹೈಕೋರ್ಟ್'ನಲ್ಲಿ ದಾವೆ ಹೂಡಿದ್ದರು. ಪೋಷಕರು ಹಾಗೂ ವಿದ್ಯಾ ಸಮಾಜ ಶಾಸ್ತ್ರ ಹಾಗೂ ಜೀವಸಾಸ್ತ್ರ ಪತ್ರಿಕೆಗಳು ಸೋರಿಕೆಯಾಗಿವೆ ಕೆಲ ಪೋಷಕರು ಹಾಗೂ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

Comments 0
Add Comment