ಪಂಜಾಬ್, ಗೋವಾ,ಮಣಿಪುರ, ಉತ್ತರಖಂಡ್ ಹಾಗೂ ಉತ್ತರ ಪ್ರದೇಶದ ಚುನಾವಣೆಗಳು ಇರುವ ಕಾರಣದಿಂದ ಮಾರ್ಚ್ ಮೊದಲ ವಾರದಿಂದ ಪರೀಕ್ಷೆ ಆರಂಭವಾಗಲಿವೆ ಎಂದು ಸಿಬಿಎಸ್'ಸಿ ಪ್ರಕಟಣೆ ತಿಳಿಸಿದೆ.

ನವದೆಹಲಿ(ಜ.9): ಕೇಂದ್ರೀಯ ಪ್ರೌಡಶಿಕ್ಷಣ ಮಂಡಳಿ(ಸಿಬಿಎಸ್'ಇ)ಯ 2017ನೇ ಸಾಲಿನ 10 ಮತ್ತು 12ನೇ ತರಗತಿಯ ಪರೀಕ್ಷೆ ಮಾರ್ಚ್ 9 ರಿಂದ ಪ್ರಾರಂಭವಾಗಲಿದೆ. ಪಂಜಾಬ್, ಗೋವಾ,ಮಣಿಪುರ, ಉತ್ತರಖಂಡ್ ಹಾಗೂ ಉತ್ತರ ಪ್ರದೇಶದ ಚುನಾವಣೆಗಳು ಇರುವ ಕಾರಣದಿಂದ ಮಾರ್ಚ್ ಮೊದಲ ವಾರದಿಂದ ಪರೀಕ್ಷೆ ಆರಂಭವಾಗಲಿವೆ ಎಂದು ಸಿಬಿಎಸ್'ಸಿ ಪ್ರಕಟಣೆ ತಿಳಿಸಿದೆ.

ತರಗತಿ 10ಕ್ಕೆ ದೇಶದಾದ್ಯಂತ 16,354 ಶಾಲೆಗಳಿಂದ 16,67 ಲಕ್ಷ ವಿದ್ಯಾರ್ಥಿಗಳು ಹಾಗೂ ತರಗತಿ 12ಕ್ಕೆ 10,677 ಶಾಲೆಗಳಿಂದ 10.98 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.ತರಗತಿ 10ರ ಪರೀಕ್ಷೆ ಏಪ್ರಿಲ್ 10ಕ್ಕೆ ಹಾಗೂ ತರಗತಿ 12ರ ಪರೀಕ್ಷೆ ಏಪ್ರಿಲ್ 29ಕ್ಕೆ ಪೂರ್ಣಗೊಳ್ಳಲಿದೆ.